About the Author

ಚುಟುಕು ಕವಿ ಎಂ. ಅಕಬರ ಅಲಿ ಅವರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡಿ ಖಾನಾಪುರದಲ್ಲಿ 1925  ಮಾರ್ಚ್‌ 3ರಂದು ಜನಿಸಿದರು. ತಂದೆ ಅಪ್ಪಾ ಸಾಹೇಬ, ತಾಯಿ ಅಮೀರಬಿ. ಪೂನಾ ಹಾಗೂ ಸಾಂಗ್ಲಿಯಲ್ಲಿ ಶಿಕ್ಷಣ ಪಡೆದ ಇವರು ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ 

ಅಧ್ಯಕ್ಷರಾಗಿದ್ದರು. ಇವರಿಗೆ ರಾಜ್ಯ ಸರ್ಕಾರದ ವಿಶೇಷ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಪ್ರಕೃತಿ ಸಂಸ್ಥೆಯಿಂದ ಪ್ರಕೃತಿ ಪ್ರಶಸ್ತಿ, ಡಿ.ವಿ.ಜಿ.ಮುಕ್ತರ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಇವರ ಪ್ರಮುಖ ಕೃತಿಗಳೆಂದರೆ ಸುಮನ ಸೌರಭ, ಅನ್ನ ತಮಸಾನದಿ ಎಡಬಲದಿ, ನವಚೇತನ (ಕವನಸಂಗ್ರಹಗಳು), ನಿರೀಕ್ಷೆಯಲ್ಲಿ (ಕಾದಂಬರಿ) ಸಾಹಿತ್ಯ ವಿವೇಚನೆ (ವಿಮರ್ಶೆ), ವಿಷಸಿಂಧು, ಗಂಧಕೇಶರ, ಸರ್ವಜ್ಞನ ಸಮಾಜದರ್ಶನ ಮತ್ತು ಸತ್ವ ಇತ್ಯಾದಿ. 2016 ಫೆಬ್ರುವರಿ 21 ರಂದು ಅಕಬರ ಅಲಿ ಅವರು ನಿಧನರಾದರು. 

ಎಂ.ಅಕಬರ ಅಲಿ

(03 Mar 1925-21 Feb 2016)