About the Author

ಲೇಖಕಿ ಅಕ್ಕಯ್ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ. ಮೂಲತಃ ಬೆಂಗಳೂರಿನವರು. ಜೀವನ ಪ್ರೀತಿಯ ಕುರಿತು ಪ್ರೇರಣಾತ್ಮಕವಾಗಿ ಮಾತನಾಡುವ ಉತ್ತಮ ವಾಗ್ಮಿ. ಲಿಂಗ ಸಮಾನತೆಯ ಇವರ ಹೋರಾಟಗಳಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಶಾಂತಿ ಹಾಗೂ ಶಿಕ್ಷಣಕ್ಕಾಗಿ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿಯು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ತಾನೊಬ್ಬಳು ಹೆಣ್ಣು ಎಂದು ಘೋಷಿಸುವ ಮೂಲಕ ವಾಹನ ಚಾಲನಾ ಪರವಾನಗಿ ಪತ್ರವನ್ನು ಪಡೆದುಕೊಂಡ ದೇಶದ ಏಕೈಕ ವ್ಯಕ್ತಿ ಎಂಬ ಖ್ಯಾತಿ ಇವರಿಗಿದೆ. ವಾಸು ಎನ್ನವ ತೃತೀಯಲಿಂಗಿಯೊಬ್ಬರಿಗೆ ಕರ್ನಾಟಕದಲ್ಲಿ ವಿವಾಹ ನೋಂದಣಿ ಮೂಲಕ ಮದುವೆಯಾದ ಮೊದಲ ಮಹಿಳೆಯೂ ಹೌದು.ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕಾಗಿ ಅವರು ‘ಒಂದೆಡೆ’ ಎಂಬ ಸಂಘಟನೆಯನ್ನೂ ಸ್ಥಾಪಿಸಿದ್ದಾರೆ.

ಅಕ್ಕಯ್ ಪದ್ಮಶಾಲಿ

Books by Author