About the Author

ಲೇಖಕ ಅಮ್ಮಿ ಎ.ಸಿ. ಚಂದ್ರಕುಮಾರ್ ಅವರು ಮೂಲತಃ ಬೆಂಗಳೂರಿನವರು. ತಂದೆ ಅಮ್ಮಿ ಚಿನ್ನಪ್ಪ, ತಾಯಿ ಕಮಲಮ್ಮ. ಅಭಿನಯ, ನಾಟಕ ರಚನೆ, ನಿರ್ದೇಶನ, ರಂಗಸಜ್ಜಿಕೆ ವಿನ್ಯಾಸ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಹವ್ಯಾಸಿಗಳು. ಪತ್ರಿಕೋದ್ಯಮದಲ್ಲಿ ಪದವೀಧರರು. ‘ಅಮ್ಮಿ ನ್ಯೂಸ್’ ಪಾಕ್ಷಿಕ ಪತ್ರಿಕೆಯ ಸಂಪಾದಕರು. ವೃತ್ತಿಯಿಂದ ಪತ್ರಕರ್ತರು.  ಕನ್ನಡ ಚಲನಚಿತ್ರ ಅಕಾಡೆಮಿ ನಡೆಸುವ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಸಾ.ರಾ. ಗೋವಿಂದು ಅವರು ಜೀವನ ಚರಿತ್ರೆ, ಕಥೆ., ಚಿತ್ರಕಥೆ. ಸಂಭಾಷಣೆ ರಚಿಸಿದ್ದಾರೆ. ಕನ್ನಡ ಪರ ಹೋರಾಟ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಕೃತಿಗಳು: ಎಲೆಮರೆಯ ಕಾಯಿ (ಸಾಮಾಜಿಕ ಚಿಂತನೆಗಳು), ಮನುಕುಲದ ಮಹಾನ್ ಹರಿಕಾರ ದಾಸಿಮಯ್ಯ, ಹುಡುಗಿಯರ ಅದ್ಭುತ ಲೋಕ ( ಪ್ರೀತಿ ನೀವರಿಯದ ನಿಗೂಢ ಜಗತ್ತು), ಪ್ರದೂಷಣ (ಬದುಕಿನ ಓಟದಲ್ಲಿ-ಕವನ ಸಂಕಲನ), ನಗುವಿನ ಹಳ್ಳಿ ಗಾಂಧಿ (ನಾಟಕ), ಕಾಲೇಜು ಗರ್ಲ್. 

ಪ್ರಶಸ್ತಿ-ಪುರಸ್ಕಾರಗಳು: ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಾಹಿತ್ಯ ಪರಿಷತ್ ಜೊತೆಗೂಡಿ  ನೀಡಿದ ‘ಕನ್ನಡ ಸೇವಾ ರತ್ನ’ ಲಭಿಸಿದ್ದು, ಹಲವಾರು ಸಂಘ-ಸಂಸ್ಥೆಗಳು ಇವರ ಸಾಹಿತ್ಯ ಹಾಗೂ ಕನ್ನಡ ಸೇವೆಗಾಗಿ ಗೌರವಿಸಿವೆ. 

ಅಮ್ಮಿ ಎ.ಸಿ. ಚಂದ್ರಕುಮಾರ್

(17 Sep 1971)

Books by Author