About the Author

ಹಿರಿಯ ಲೇಖಕ ಅನಂತಾಚಾರ್ಯ ರಘುನಾಥಾಚಾರ್ಯ ಆದ್ಯ ಮೂಲತಃ ವಿಜಾಪುರ ಜಿಲ್ಲೆಯ ಅಗರಖೇಡದವರು. ಕಾವ್ಯ ವ್ಯಾಕರಣ, ನ್ಯಾಯ, ವೇದಾಂತ ಹಾಗೂ ಕೆಲವು ಕಾಲ ಸಂಸ್ಕೃತ ಅಧ್ಯಾಪಕರಾಗಿ ಧಾರವಾಡ ಹಾಗೂ ವಿಜಾಪುರಗಳಲ್ಲಿ ಕೆಲಸ ಮಾಡಿದರು. ಆಯುರ್ವೇದ ಶಾಸ್ತ್ರ ವ್ಯಾಸಂಗ ಮಾಡಿದ್ದು, ಅಲೀಗಡದ ಅಖಿಲ ಭಾರತೀಯ ವಿದ್ವತ್ ಸಮ್ಮೇಳನದಿಂದ ’ಆಯುರ್ವೇದ ತೀರ್ಥ’ ಪ್ರಶಸ್ತಿ ಪಡೆದಿದ್ದಾರೆ. ಕೇಶವ ಆರ್ಷ ಔಷಧಾಲಯವನ್ನು ಸ್ಥಾಪಿಸಿ, ಆರ್ಯವೈದ್ಯಕ ಶಾಲೆ ಆರಂಭಿಸುತ್ತಾರೆ. ನಿಖಿಲ ಕರ್ನಾಟಕ ಆಯುರ್ವೇದ (ನಿ.ಕ.ಅ) ಸಮ್ಮೇಳನದ 6 ನೇ ಅಧಿವೇಶನದ ಅಧ್ಯಕ್ಷರಾಗಿದ್ದರು. 1938 ರಲ್ಲಿ ಆರ್ಯವೈದ್ಯಕ ಗ್ರಂಥಮಾಲೆ ಹಾಗೂ ನಿ.ಕ.ಆ ಮಂಡಲದ ಮುಖಪತ್ರ ’ಧನ್ವಂತರಿ’ ಪತ್ರಿಕೆಯ ಸಂಪಾದಕರಾಗಿದ್ದರು. 

 ಕೃತಿಗಳು: ಅಷ್ಟಾಂಗಹೃದಯ( ಸೂತ್ರಸ್ಥಾನ), ಆಯುರ್ವೇದ ವೈಶಿಷ್ಟ್ಯ ಅಥವಾ ಆಯುರ್ವೇದದಲ್ಲಿ ಏನಿದೆ. ಆಯುರ್ವೇದಿಯ ಔಷಧೀ ಗುಣಧರ್ಮಶಾಸ್ತ್ರ ಭಾಗ- 1, ಚರಕಸಂಹಿತಾ( ಚಿಕಿತ್ಯಾಸ್ತಾನ), ಬಾಲಸುಭಾಷಿತಮ್, ರಘಸಂಭವಮ್.

ಅನಂತಾಚಾರ್ಯ ರಘುನಾಥಾಚಾರ್ಯ