ಲೇಖಕಿ `ಅನಿತಾ ಸಿಕ್ವೇರಾ' ಮಾರ್ಚ್ 23, 1978ರಲ್ಲಿ ಜನಿಸಿದರು. ಇವರು ಮೂಲತಃ ಕೊಡಂಕೂರು ನ್ಯೂ ಕಾಲನಿ, ವಯಾ: ಅಂಬಲಪಾಡಿ, ನಿಟ್ಟೂರು, ಅಂಚೆ: ಉಡುಪಿಯವರು. ಕಥಾ ಸಂಕಲನ: ಅಕ್ಕಾ ನೀನ್ಯಾಕೆ ನನ್ನ ಪ್ರೀತಿಸುತ್ತೀ..!? ಯುವವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಇವರ ಕವನ, ಕಥೆಗಳು ಪ್ರಸಾರವಾಗಿವೆ. ದೂತ, ನವಜ್ಯೋತಿ (ಧಾರ್ಮಿಕ), ಮಂಗಳ, ತರಂಗ, ಸಂಯುಕ್ತ ಕರ್ನಾಟಕಗಳಲ್ಲಿ ಕವನಗಳು, ಕಥೆಗಳು ಪ್ರಕಟವಾಗಿವೆ.