ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ತೂರು ಗ್ರಾಮದವರು. ಕೃಷಿಕ ಕುಟುಂಬದಿಂದ ಬಂದ ಇವರು, ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಬಳಿಕ ತಮ್ಮದೇ ಕ್ಲಿನಕ್ ಒಂದನ್ನು ಶುರುಮಾಡಿ ಸಾವಿರಾರು ಬಡ ರೋಗಿಗಳಿಗೆ ದಾನಿಗಳ ಮೂಲಕ ಉಚಿತ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದ್ಧಾರೆ. ಇವರ ಸೇವೆಗೆ ಭಾರತೀಯ ವೈದ್ಯಸಂಘದಿಂದ ʻಸಮಾಜಮುಖಿ ವೈದ್ಯ ರಾಷ್ಟ್ರೀಯ ಪ್ರಶಸ್ತಿʼ (2015-2016), ʻಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿʼ (2013), ʻದೇವರಾಜ ಅರಸು ರಾಜ್ಯ ಪುರಸ್ಕಾರʼ, ʻಸಾಧನ ರತ್ನ ಪ್ರಶಸ್ತಿʼ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ. ವೃತ್ತಿ ಹಾಗೂ ಸಮಾಜ ಕಾರ್ಯಗಳ ಜೊತೆ ಬರವಣಿಗೆ ಇವರ ಮೆಚ್ಚಿನ ಹವ್ಯಾಸ. ಈಗಾಗಲೇ ಹಲವಾರು ಲೇಖನಗಳೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ʻಚುಚ್ಚು ಮದ್ದುʼ (ಕವನ ಸಂಕಲನ), ʻಕಾಯಿಲೆಗಳು ಮನೆ ಮಾತು, ವೈದ್ಯರುಗಳು ಕಿವಿ ಮಾತುʼ (ಲೇಖನ), ʻಮದ್ದಲ್ಲ ಕಷಾಯʼ, ʻಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗʼ(ಅನುಭವ ಕಥನ).