ಲೇಖಕ ಅಣ್ಣಯ್ಯ ಕುಲಾಲ ಎಂ. ಡಾ. ಜೂನ್ 1, 1970 ರಲ್ಲಿ ಜನಿಸಿದರು. ಇವರು ಮೂಲತಃ ಮಂಗಳೂರಿನ ಮಾರ್ನಮಿ ಕಟ್ಟೆಯವರು. ಆರೋಗ್ಯ ಕೃತಿಗಳು, ಕವನ ಸಂಕಲನ, ಚುಚ್ಚುಮದ್ದು, ವೈದ್ಯಕೀಯ ಲೇಖನಗಳು, ಮದ್ದಲ್ಲ ಕಷಾಯ, ಕಾಯಿಲೆಗಳು ಮನೆಮಾತು- ವೈದ್ಯರುಗಳ ಕಿವಿಮಾತು ಹೀಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅತ್ಯಂತ ಬಡತನದಲ್ಲಿ ಅನೇಕ ವಿದ್ಯಾಭಿಮಾನಿ ಗಣ್ಯರ ಸಹಕಾರದಿಂದ ಎಂ.ಬಿ.ಬಿ.ಎಸ್ ಪದವಿಯನ್ನು ಯಶಸ್ವಿಯಾಗಿ ಮುಗಿಸಿ, ವೃತ್ತಿ ಜೀವನದಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.