ಕವಯತ್ರಿ ಅನ್ನಪೂರ್ಣ ಬಸವರಾಜ್ ಅವರು 1935 ಅಕ್ಟೋಬರ್ 09ರಂದು ಜನಿಸಿದರು. ತಂದೆ ಟಿ.ಎನ್. ಚೆನ್ನಪ್ಪ, ತಾಯಿ ಸಿದ್ಧಗಂಗಮ್ಮ. ’ಗೌರೀ ಕೌಸ್ತುಭಂ-ಭಕ್ತಿ ಸ್ತುತಿಗೀತೆಗಳು, ಕದಳಿ ಕೌಸ್ತುಭ, ವಚನಾಂತ್ಯಾಕ್ಷರಿ’ ಪ್ರಮುಖ ಕೃತಿಗಳು. ’ಕೂಡಿಟ್ಟ ಕವನ’ ಕವನ ಸಂಕಲನ 2011 ರಲ್ಲಿ ಬಿಡುಗಡೆಯಾಯಿತು. ಅವರಿಗೆ 2008 ರಲ್ಲಿ ’ಸಾಹಿತ್ಯ ಸೇತು ಪ್ರಶಸ್ತಿ’ ದೊರೆಯಿತು.