About the Author

ಕತೆಗಾರ್ತಿ, ಕವಯತ್ರಿ ಅನ್ನಪೂರ್ಣ ವೆಂಕಟನಂಜಪ್ಪ ಅವರು 1953 ಜನವರಿ 10 ಹಾಸನದಲ್ಲಿ ಜನಿಸಿದರು.ತಂದೆ ಹೆಚ್.ವಿ. ಸುಬ್ಬರಾವ್, ತಾಯಿ ಲಕ್ಷ್ಮಿದೇವಮ್ಮ. ’ಸಮಾನತೆ, ನೆನೆವುದೆನ್ನ ಮನ’ ಅವರ ಸಂಪಾದಿತ ಕವನ ಸಂಕಲನಗಳು. ’ಮೊದಲ ಹೆಜ್ಜೆಗಳು’ ಅವರ ಕಥಾ ಸಂಕಲನ. ’ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಇನ್ನರ್‌ವೀಲ್ ಅತ್ಯುತ್ತಮ ಕ್ಲಬ್ ಪ್ರಶಸ್ತಿ, ಜಿಲ್ಲಾ ಶ್ರೇಷ್ಠ ಸಹಕಾರಿ ಪ್ರಶಸ್ತಿ, ರಾಕ್‌ಲೈನ್ ಪತ್ರಿಕೆಯ ದಶಮಾನೋತ್ಸವ ಪ್ರಶಸ್ತಿ’ಗಳು ಅವರ ಮುಡಿಗೇರಿದೆ. ’ತುಮಕೂರು ಜಿಲ್ಲಾ ಶಾಖೆಯ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿರುವ ಅವರು ಮಹಿಳಾ ಸಮಾಜ ಟ್ರಸ್ಟ್ ಅಧ್ಯಕೆಯಾಗಿದ್ದರು. ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕಿ, ಜಿಲ್ಲಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಂಸ್ಥಾಪಕಿ ಹಾಗೂ ಸ್ಥಾಪಕ ಅಧ್ಯಕ್ಷೆ’ಯಾಗಿ ಕೆಲಸ ನಿರ್ವಹಿಸಿದ್ದಾರೆ.

ಅನ್ನಪೂರ್ಣ ವೆಂಕಟನಂಜಪ್ಪ

(10 Jan 1953)