ಕವಯತ್ರಿ ಅನುರಾಧಾ ಎಂ. ಕುಲಕರ್ಣಿ ಅವರು 1952 ಮೇ 27ರಲ್ಲಿ ಜನಿಸಿದರು. ತಂದೆ ಗಂಗಾಧರ್ ಭಟ್ ಜೋಷಿ, ತಾಯಿ ಸೋನಕ್ಕ ಜೋಷಿ. ’ಚೊಚ್ಚಿಲು, ಶ್ರೀದೇವಿ ಉಪಾಸನಾ ಪ್ರಭಾ, ಆರತಿಯ ವೈಶಿಷ್ಟಗಳು’ ಅವರ ಕವನ ಸಂಕಲನಗಳು. ’ಮನಸ್ಸಿನೊಳಗಿನ ಕನಸುಗಳು’ ಅವರ ಸಂಪಾದಿತ ಕೃತಿ. ಅತ್ತಿಮಬ್ಬೆ ಪ್ರತಿಷ್ಠಾನದಿಂದ 'ಚೊಚ್ಚಿಲು ಅತ್ತಿಮಬ್ಬೆ ಪ್ರಶಂಸಾ ಪ್ರಶಸ್ತಿ, ರಾಜ್ಯೋತ್ಸವ ಕೃತಿ ಪ್ರಶಸ್ತಿ ಲಭಿಸಿವೆ.