About the Author

ಸೃಜನಶೀಲ ಉದಯೋನ್ಮುಖ ಬರಹಗಾರ ಅರವಿಂದ ಚಾಂದೆ. ಇವರು ಮೂಲತಃ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದ ಶಂಕರ ಚಾಂದೆ ಮತ್ತು ಜ್ಞಾನಬಾಯಿ ಚಾಂದೆ ದಂಪತಿಗಳಿಗೆ ದಿನಾಂಕ 1-7-1990ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್.ಮತ್ತು ಎಂ.ಎ.ಪತ್ರಿಕೋದ್ಯಮ, ಮತ್ತು ಸಿನಿಮಾ ನಾಟಕದಲ್ಲಿ ಪದವಿ ಪಡೆದು ಪಿ.ಎಚ್.ಡಿ. ಅಧ್ಯಯನದೊಂದಿಗೆ ಬಸವಕಲ್ಯಾಣ ತಾಲೂಕಿನ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸ್ಥಾಪಕ ಗೀಳು ಬೆಳೆಸಿಕೊಂಡ ಇವರು 'ಉಲಿದ ಮೌನ’ ‘ಚುಕ್ಕಿಯ ಚಿತ್ತಾರ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮೈಸೂರಿನ 'ಮೈಸೂರು ಧ್ವನಿ' ಎಂಬ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ.

ಅರವಿಂದ ಚಾಂದೆ