About the Author

ಹಿರಿಯ ಸಾಹಿತಿ ಅರ್ಚಕ ವೆಂಕಟೇಶ ಅವರು 1916 ಜುಲೈ 5ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ರಾಧಾಬಾಯಿ. ತಂದೆ ಗೋಪಾಲಕೃಷ್ಣಾಚಾರ್ಯ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಿಗಿಸಿಕೊಂಡಿದ್ದ ಇವರು ನನ್ನ ನುಡಿ ಕೈಬರಹ ಪತ್ರಿಕೆಯಲ್ಲಿ ಬರವಣಿಗೆ ಆರಂಭಿಸಿದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಯ ಮೂಲಕ ವೃತ್ತಿ ಆರಮಭಿಸಿದರು. ಕತೆ, ಕಾದಂಬರಿ, ನಾಟಕ, ಕವನ ಸಂಕಲನ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಆರಂಭಿಸಿದ್ದ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ದಿಲ್ಲಿ ಚಲೋ, ರವಿಶಂಕ, ಅಸ್ತಿಪಂಜರ, ಧ್ರುವ ನಕ್ಷತ್ರ, ಜೀವನ ಸಂಗರಾಮ, ಪೂರ್ಣಚಂದ್ರ, ಶಬ್ದಶಿಲ್ಪ ಶಿಲಾಪಕ್ಷಿ, ಸಂಧ್ಯಾರಾಗ, ಮೀರ್‌ಸಾದಿಕ್‌, ಪಂಗನಾಮ, ಬ್ಲಾಕ್‌ ಮಾರ್ಕೆಟ್‌, ಭಾತೃಪ್ರೇಮ, ಪಾನಕ ಕೋಸಂಬರಿ, ಹರಿದ ಚಂದ್ರ, ಪ್ರಹ್ಲಾದನ ಪಾಣಿಪತ್ತು, ಸಾವನದುಗಧ, ಜಯ-ವಿಜಯ, ಸ್ವಾಮಿ ವಿವೇಕಾನಮದ, ಸುಭಾಷ್‌ಚಂದ್ರ ಬೋಸ್‌, ಮನದಮೋಹನ ಮಾಳವೀಯ, ರಮಣ ಮಹರ್ಷಿ, ರಾಮನ ಕತೆ, ಭಕ್ತಿಗೀತಾಮೃತ ಸೇರಿ ಹಲವಾರು ಕೃತಿಗಳನ್ನು ರಚಿಸಿದ್ದರು. ಇವರು 1997 ಡಿಸೆಂಬರ್‌ 20ರಂದು ನಿಧನರಾದರು.

ಅರ್ಚಕ ವೆಂಕಟೇಶ್‌

(05 Jul 1916-20 Dec 1997)