ಲೇಖಕಿ ಅರ್ಚನಾ ಆರ್ಯ ಅವರು ಮೂಲತಃ ಬೆಂಗಳೂರಿನವರು. ಎಂ.ಎ, ಬಿ.ಎಡ್, ಎಂ.ಫಿಲ್ ಪದವೀಧರರು. ಕಲೆ, ಚಿತ್ರಕಲೆ, ಕಸೂತಿಯಲ್ಲಿ ಆಸಕ್ತರು. ವೃತ್ತಿಯಿಂದ ಶಿಕ್ಷಕಿ. ಆಕಾಶವಾಣಿ ದೂರದರ್ಶನ ನಿರೂಪಣೆ, ಬರೆವಣಿಗೆ, ಓದು-ಇವು ಹವ್ಯಾಸಗಳು. 'ಆರ್ಯಸಮಾಜದ ಮೌಲ್ಯಗಳು' ಕೃತಿಯನ್ನು ಅನುವಾದಿಸಿದ್ದಾರೆ. ಅವರ ಅಮರನಾಥ ಯಾತ್ರೆಯ ಪ್ರವಾಸ ಕಥನವನ್ನು ಒಳಗೊಂಡ ‘ಆಹ್ನಿಕ’ ಕೃತಿ 2020ರಲ್ಲಿ ಪ್ರಕಟಣೆ ಕಂಡಿದೆ. ‘ಅಯನಾ’ ಹೆಸರಿನಲ್ಲಿ ವಿವಿಧ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಹಠಯೋಗಶಾಲೆ ಮತ್ತು AYANA YouTube channel ನಡೆಸುತ್ತಿದ್ದಾರೆ.