About the Author

ಡಾ. ಅರ್ಜುನಪುರಿ ಅಪ್ಪಾಜಿಗೌಡ  ಅವರು  ನಿವೃತ್ತ ಪ್ರಾಂಶುಪಾಲ, ಸಾಹಿತಿ ಹಾಗೂ ಪತ್ರಕರ್ತರಾಗಿದ್ದರು. ಕನ್ನಡದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದಿದ್ದ ಅವರು ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಎಚ್‌.ಕೆ.ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 'ದೌರ್ಬಲ್ಯ, “ಹೀಗೊಂದು ಬಾಳು' ಮುಂತಾದ ಕಾದಂಬರಿ ರಚಿಸಿದ್ದರು. 'ನಂಜನಗೂಡು ತಿರುಮಲಾಂಬ ಒಂದು ಅಧ್ಯಯನ' ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಪಿಎಚ್‌.ಡಿ ಪದವಿ ನೀಡಿತ್ತು. 'ಪ್ರಜಾವಾಣಿ' ಹಾಗೂ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗಳ ಮದ್ದೂರು ವರದಿಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮದ್ದೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

ನಿಸರ್ಗದ ಕರೆ, ಕುವೆಂಪು ಸಾಹಿತ್ಯ ಪರಿಚಯ, ಜಾತಿ ಬಿಟ್ಟ ಪ್ರೀತಿ, ಈಗೊಂದು ಬಾಳು, ಮದ್ದೂರು ತಾಲೂಕು ದರ್ಶನ, ಸಕಾಲ ಸ್ಪಂದನ, ಸಂಘಟನಾ ಚತುರ ಎಚ್‌.ಕೆ.ವೀರಣ್ಣಗೌಡ, ಮಂಥನ, ಮನ ಕಲಕಿದವರು, ಚಿತ್ತ ಕಲಕಿದ ಚಿಂತನೆ ಅವರ ಪ್ರಕಟಿತ ಕೃತಿಗಳು.

ಅರ್ಜುನಪುರಿ ಅಪ್ಪಾಜಿಗೌಡ