About the Author

ಅರುಣಾ ಶ್ರೀನಿವಾಸ ಇವರು ಸಾರಸ್ವತ ಲೋಕದ ಉದಯೋನ್ಮುಖ ಬರಹಗಾರರಾಗಿದ್ದು, ಇವರ ತವರೂರು ಕೇರಳದ ಮಂಜೇಶ್ವರ. ಸತ್ಯಭಾಮಾ ಮತ್ತು ಪುರುಷೋತ್ತಮ ರಾವ್ ದಂಪತಿಗಳ ಪುತ್ರಿಯಾದ ಇವರು ತಮ್ಮ ಹೈಸ್ಕೂಲು ದಿನಗಳಿಂದಲೂ ಸಣ್ಣ ಪುಟ್ಟ ಕತೆ, ಕವನಗಳನ್ನು ಬರೆಯುತ್ತಿದ್ದರು. ಪದವಿಯಲ್ಲಿ ಆಯ್ದುಕೊಂಡ ಆಂಗ್ಲ ಸಾಹಿತ್ಯ ಹಾಗು ಶಿಕ್ಷಕರ ನಿರಂತರ ಪ್ರೋತ್ಸಾಹದಿಂದ ಬರವಣಿಗೆಯಲ್ಲಿ ತಮ್ಮದೇ ಶೈಲಿಯನ್ನು ರೂಢಿಸಿಕೊಂಡ, ಅರುಣಾ ಶ್ರೀನಿವಾಸ ಅವರ ಕೆಲವೊಂದು ಕತೆ ಕವನಗಳು ಮಂಗಳೂರು ಆಕಾಶವಾಣಿಯಲ್ಲೂ ಬಿತ್ತರಗೊಂಡಿದ್ದವು.

ಮುಂದೆ ವೈವಾಹಿಕ ಬಂದುಕಿನಲ್ಲಿ ಏಳೆಂಟು ವರುಷಗಳ ತಡೆ ಬರವಣಿಗೆಗೆ ದೊರೆತರೂ, ಬದುಕಿನ ಏಕತಾನತೆಯಿಂದ ಹೊರಬರಲು ಮತ್ತೆ ಬರವಣಿಗೆಗಾಗಿ ತಮ್ಮ ಬಿಡುವಿನ ವೇಳೆಯನ್ನು ವ್ಯಯಿಸಿಕೊಂಡರು. ಪ್ರಸ್ತುತ ಶ್ರೀನಿವಾಸ ಅವರನ್ನು ವಿವಾಹವಾಗಿ ಧರ್ಮಸ್ಥಳದ ಸಮೀಪದ ಉಜಿರೆಯಲ್ಲಿ ನೆಲೆಸಿರುವ ಇವರು ಕವನ, ಗಜ಼ಲ್, ಚುಟುಕು, ಹೈಕು, ರುಬಾಯಿ, ಅಬಾಬಿ, ಮುಕ್ತಕ ಅಲ್ಲದೆ ನ್ಯಾನೋ ಕತೆ, ಸಣ್ಣ ಕತೆ ಮುಂತಾದ ಸಾಹಿತ್ಯಪ್ರಕಾರಗಳನ್ನೂ ಬರೆಯುತ್ತಾರೆ. ಅವರು ಬರೆದಿರುವ ಕೆಲವು , ಕತೆ, ಕವನ, ಅಂಕಣಗಳು ಮಂಜುವಾಣಿ, ಮಂಗಳ, ಸುದ್ದಿ ಬಿಡುಗಡೆ, ಬೆಳಗಾವಿಯ ಸುಪ್ರಸಿದ್ಧ ಪತ್ರಿಕೆ ಕುಂದಾ ನಗರಿ ಮುಂತಾದವುಗಳಲ್ಲಿ ಆಗಾಗ ಬಿತ್ತರಗೊಳ್ಳುತ್ತಿರುತ್ತವೆ. ದಿನನಿತ್ಯದ ಬದುಕಿನ ಜವಾಬ್ದಾರಿಗಳಿಂದ ಬರವಣಿಗೃಯಲ್ಲಿ ಪೂರ್ಣರೂಪದಲ್ಲಿ ತೊಡಗಿಕೊಳ್ಳಲಾಗದಿದ್ದರೂ ಬಿಡುವಿನ ವೇಳೆಯನ್ನು ಆತ್ಮ ಸಂತೃಪ್ತಿಗಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರು ಸುಮಾರು ಮೂರು ವರುಷಗಳಿಂದ ಶ್ರೀತುಳಸಿ ಮಾಸ ಪತ್ರಿಕೆಯಲ್ಲಿ ಅಂಕಣ ಬರವನ್ನು ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ.

ಪ್ರಸ್ತುತವಾಗಿ ಮೊಗ್ಗರಳಿ ಹೂವಾಗಿ ಎಂಬ ಮಕ್ಕಳ ಮನೋಮಾಲಿಕೆಯು ಕಳೆದೊಂದು ವರುಷದಿಂದ ಪ್ರತೀ ತಿಂಗಳೂ ಪ್ರಕಟವಾಗುತ್ತಾ ಇದೆ. ’ಬದುಕು ಬೆಳಕು’ ಮತ್ತು ‘ಹೂವು ಅರಳಿದ ಹೊತ್ತು’ ಅವರ ಬಿಡುಗಡೆಯಾಗಿರುವ ಎರಡು ಕೃತಿಗಳು.

ಅರುಣಾ ಶ್ರೀನಿವಾಸ