ಬರಹಗಾರ್ತಿ ಆಶಾದೇವಿ ವಿ. ಸೋಬಾ ಅವರು 1965 ಮೇ 01 ಗುಲಬರ್ಗಾದಲ್ಲಿ ಜನಿಸಿದರು. ತಂದೆ ಮಲ್ಲಿಕಾರ್ಜುನಪ್ಪ ನೂಲಾ, ತಾಯಿ ಸುಜ್ಞಾನಮ್ಮ. ’ರಾಷ್ಟ್ರೀಯ ಸದ್ಭಾವ ಗೀತೆಗಳು’ ಎಂಬ ದೇಶಭಕ್ತಿ ಗೀತೆಗಳ ಸಂಗ್ರಹವನ್ನು 1997ರಲ್ಲಿ ಹೊರತಂದಿದ್ದಾರೆ. ’ನನ್ನ ಪ್ರವಾಸ ಕಥನ’ ಎಂಬ ಅವರ ಪ್ರವಾಸ ಅನುಭವ ಕುರಿತ ಕೃತಿ 2000ರಲ್ಲಿ ಪ್ರಕಟವಾಯಿತು.