About the Author

ಬಸವತತ್ವ ಪ್ರಚಾರ ಕಾಳಜಿಯ ಹಸ್ತಪ್ರತಿ ಸಂಗ್ರಹಕಾರ ಹಾಗೂ ಶರಣ ಸಂಶೋಧಕ ಅಶೋಕ ದೊಮ್ಮಲೂರು. ಎಂ ಕೃಷ್ಣಪ್ಪ ಮತ್ತು ತಾಯಿ ಶ್ರೀಮತಿ ಲಕ್ಷ್ಮಮ್ಮರ ಮಗನಾಗಿ 19 ಎಪ್ರಿಲ್ 1967 ರಲ್ಲಿ ಬೆಂಗಳೂರಿನ ದೊಮ್ಮಲೂರಿನಲ್ಲಿ ಜನಿಸಿಸಿದರು. ಮೂಲತಃ ಬಿಇ ಪದವಿದರ, ತಂತ್ರಜ್ಞಾನ ಉದ್ಯಮಿ. ಬಸವತತ್ವಗಳಲ್ಲಿ ಮೂಡಿದ ಆಸಕ್ತಿಯಿಂದ ತಮ್ಮ ಪೂರ್ವಾ ಶ್ರಮ ವೃತ್ತಿಯಿಂದ ಹೊರಬಂದು ಕಲಿತ ತಂತ್ರಜ್ಞಾನವನ್ನು ಶರಣ ಸಂಶೋಧನೆಗೆ ಮೀಸಲಿಟ್ಟಿದ್ದಾರೆ. ಶರಣ ಸಾಹಿತ್ಯ ಉಳಿಸಿ ಮುಂದಿನ ತಲೆಮಾರಿ ಕೊಂಡೊಯ್ಯವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ವಚನತತ್ವಗಳ ಪ್ರಚಾರಕ್ಕೆ ಸಂಬಂಧಿಸಿ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಇಲ್ಲಿಯವರೆಗೂ 15 ಲಕ್ಷಕ್ಕೂ ಹೆಚ್ಚು ತಾಳೆಗರಿಗಳ ಡಿಜಲೀಕರಣ ಮಾಡಿದ್ದಾರೆ. ಮತ್ತು ಸರ್ಕಾರದಿಂದ ಮಡಿವಾಳ ಮಾಚಿದೇವ ಜಯಂತಿ ಮಂಜೂರು, ಮಾಚಿದೇವ ಜನ್ಮ ಸ್ಥಳ ಅಭಿವೃದ್ಧಿಗೆ ಮೂರು ಕೋಟಿ ಮಂಜೂರು ಹಾಗೂ ಸ್ಮಾರಕ ನಿರ್ಮಾಣ, ಇವರು ಬೆಂಗಳೂರಿನ ಪ್ರತಿಷ್ಠಿತ ರಸ್ತೆ ಹಾಗೂ ವೃತ್ತಿಗಳಿಗೆ ಶರಣರ ಹೆಸರಿಡಲು ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ ಹಾಗೂ ಯಶಸ್ವಿಯೂ ಆಗಿರುತ್ತಾರೆ.
ಸದಾ ಬಸವಾದಿ ಶರಣರ ಸೇವೆಗೆಯುತ್ತಿರುವ ಇವರು ಸರ್ವ ಶರಣ ಬಂಧುಗಳ ಕೃಪೆಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿಗಳು: 1.ಜಾಗತಿಕ ಲಿಂಗಾಯತ ಮಹಾಸಭಾದ ಬೆಂಗಳೂರು ಘಟಕದಿಂದ ವಾರ್ಷಿಕ ಪ್ರಶಸ್ತಿ, 2. Giants welfare ಫೌಂಡೇಶನ್ ದಿಂದ "ಬಸವ ಶಿಲ್ಪಿ" 3. ಅಖಿಲ ಭಾರತ ಗಾಡಗೆ ಬಾಬಾ ಸಂಸ್ಥೆ ಗಾಡಗೆ ಬಾಬಾ ರಾಷ್ಟ್ರೀಯ ಪುರಸ್ಕಾರ, 4. ಮಡಿವಾಳ ಶ್ರೀ ಮಾಚಿದೇವ ಪ್ರಶಸ್ತಿ, 5. ಬಸವ ಸೇವಾರತ್ನ - ಬಸವ ಸೇವಾ ಸಮಿತಿ ಹೆಚ್ಚು ಎ. ಎಲ್, 6. ಬಸವ ಕಾರುಣ್ಯ ಪ್ರಶಸ್ತಿ, 7. ಶರಣ ಸೇವಾರತ್ನ - ಮಾತಾಜಿ ಅವರ ಸಂಸ್ಥೆಯ ಕಲ್ಯಾಣ ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕೃತಿಗಳು: ಮಾಚಿದೇವರ ಜೀವನ ಚರಿತ್ರೆ, ಗಹನ ಚೇತನ ಗಾಡಗೆ ಬಾ ಬಾ (5 ಭಾಷೆಗಳಲ್ಲಿ), ಮಾಚಿದೇವರ ಸಮಗ್ರ ವಚನಗಳು (ಶರಣ ಸಾಹಿತ್ಯ ಪರಿಷತ್ತು), ಬಸವೇಶ್ವರರ ಷಟ್ ಸ್ಥಲ ವಚನಗಳು.

ಅಶೋಕ್ ದೊಮ್ಮಲೂರು