About the Author

ಡಾ.ಅಶೋಕ ಕಾಮತ್ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣದ ನೆಲೆಗಳು’ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಡಾ.ನಿಕೇತನ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸೇವಾಪೂರ್ವದಲ್ಲಿ ಬಿ.ಎಸ್ಸಿ, ಬಿ.ಇಡಿ ಪದವಿ ಹೊಂದಿದ್ದ ಇವರು ಸೇವಾವಧಿಯಲ್ಲಿ ಕನ್ನಡ ಎಂ.ಎ ಹಾಗೂ ಎಂ.ಇಡಿ. ಪದವಿಯನ್ನು ಗಳಿಸಿದ್ದಾರೆ.

ಭಾರತ ಸರ್ಕಾರದ ಕ್ಯಾಬಿನೇಟ್ ಸೆಕ್ರೆಟೆರಿಯೇಟ್ ನಲ್ಲಿ ಅಸ್ಸಾಂ, ಗುಜರಾತ್ ಹಾಗೂ ನವದೆಹಲಿಗಳಲ್ಲಿ ಸೇವೆಯನ್ನು ಸಲ್ಲಿಸಿ ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ ವಳಕಾಡು-ಉಡುಪಿ ಹಾಗೂ ಇಂದಿರಾನಗರ ಮುಖ್ಯ ಶಿಕ್ಷಕರಾಗಿ , ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ, ಮಂಗಳೂರಿನ ಸರ್ಕಾರಿ ಶಿಕ್ಷಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿದವರು. ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಗಾಗಿ ಇಂಟೆಲ್ ಸಂಸ್ಥೆಯಿಂದ ರಾಷ್ಟ್ರೀಯ ಪ್ರಶಸ್ತಿ(2005), ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿ(2010)ಭಾಜನರಾಗಿದ್ದಾರೆ.

ಮುಖ್ಯ ಶಿಕ್ಷಕರಿಗೆ ನಾಯಕತ್ವ ತರಬೇತಿ, ಶಿಕ್ಷಕರ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ರಾಜ್ಯಾದಾದ್ಯಂತ ಅನೇಕ ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಯಶಸ್ವಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಅಶೋಕ ಕಾಮತ್