About the Author

ಅಶೋಕ ಶೆಟ್ಟರ್ ಸೃಜನ ಮತ್ತು ಸೃಜನೇತರ ಪ್ರಕಾರಗಳೆರಡರಲ್ಲೂ ಆಸಕ್ತಿ ಹೊಂದಿರುವ ಅಶೋಕ ಶೆಟ್ಟರ್ ಕನ್ನಡದ ಗಮನಾರ್ಹ ಬರಹಗಾರರಲ್ಲೊಬ್ಬರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಪೂರೈಸಿದ ಇವರು ಐದು ವರ್ಷ (1981-86) ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿ ಯಾಗಿದ್ದವರು. ೧೯೮೬ರಿಂದೀಚೆ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ.

(ವಿಶ್ವವಿದ್ಯಾಲಯದ ವಾಚನಾಲಯದೊಳಗೆ' ಕವನ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಇವರು ಸಾಹಿತ್ಯ ಹಾಗೂ ಇತಿಹಾಸ ಕುರಿತು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಬರೆದ ಹಲವಾರು ಲೇಖನಗಳು ಪ್ರಕಟವಾಗಿವೆ. “ಸ್ಟಡೀಸ್ ಇನ್ ಕರ್ನಾಟಕ ಹಿಸ್ಟರಿ ಆಂಡ್ ಕಲ್ಟರ್' (ಸಂಪುಟ IV), 'ಮಲೆಕರ್ನಾಟಕದ ಅರಸುಮನೆತನಗಳು' ಮತ್ತು “ಕಲಾಪಯಣಿಗರು' ಇವರು ಸಂಪಾದಿಸಿದ ಇತರ ಪ್ರಕಟಿತ ಕೃತಿಗಳು,

 

ಅಶೋಕ ಶೆಟ್ಟರ್