About the Author

ಡಾಕ್ಟರ್‌ ಅಶೋಕ ಸೊನ್ನದ, ಬಾಗಲಕೋಟೆ ಜಿಲ್ಲೆಯ ಮೊಧೋಳ ತಾಲೂಕಿನ ಭಂಟನೂರು ಗ್ರಾಮದವರು. ಅಶೋಕ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಬಿಬಿಸ್ ಮುಗಿಸಿ, ಅಹ್ಮದಾಬಾದನಲ್ಲಿ ಸ್ನಾತಕೋತ್ತರ ಅಭ್ಯಸಿಸುತ್ತಿರುವಾಗ , ಅಮೇರಿಕಕ್ಕೆ ತೆರೆಳುವ ಅವಕಾಶ ಸಿಕ್ಕಿತು. ಅಮೇರಿಕಾದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕನ್ ಅಕಾಡೆಮಿ ಆಫ್ ಕ್ಲಿನಿಕಲ್‌ ಲಿಪಿಡೋಲಜಿ ಎಂಬ ಒಂದು ವರ್ಷದ ಕೋರ್ಸ್ ಪೂರೈಸಿ, 401 ನೇಯ ಸದಸ್ಯರು ಇವರು ಎಂಬ ಹೆಗ್ಗಳಿಕೆ ಪಡೆದರು. 1974 ರಿಂದ 2010 ವರೆಗೂ ಅಮೆರಿಕಾದಲ್ಲಿ ನಾನಾ ಕಡೆ ಇದ್ದು, ಹಲವು ಪ್ರಸಿದ್ಧ ವೈದ್ಯರೊಡಗೂಡಿ, ನೂರಾರು ಸಫಲ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಇವರ ಸೇವೆ ಗುರುತಿಸಿ ಫೈಜರ್ ಕಂಪನಿ ಗೌರವಿಸಿದೆ ಮಿಚಿಗನ ವಿಶ್ವವಿದ್ಯಾಲಯದಿಂದ ಬೆಸ್ಟ್ ಟೀಚರ್ ಪ್ರಶಸ್ತಿ ಸಂದಿದೆ.

ಅಶೋಕ ಸೊನ್ನದ