ಲೇಖಕ ಅಶೋಕ ಬಳ್ಳಾ ಅವರು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದವರು. ಬಾಹ್ಯವಿದ್ಯಾರ್ಥಿಯಾಗಿ ಎಸ್.,ಎಸ್. ಎಲ್.ಸಿ ತೇರ್ಗಡೆಯಾದರು. ನಂತರ ಎಂ.ಎ. ಹಾಗೂ ಬಿ.ಇಡಿ ಪದವಿ ಪೂರ್ಣಗೊಳಿಸಿದರು. ವೃತ್ತಿಯಿಂದ ಶಿಕ್ಷಕರು.
ಅವನಿಲ್ಲದೇ ನಾನು ಹುಟ್ಟಿಲ್ಲ (ಕವನ ಸಂಕಲನ), ಕರ್ ಕರ್ ಕಪ್ಪೆ (ಮಕ್ಕಳ ಕಥಾ ಸಂಕಲನ), ಅವಳ ಸತ್ತ ನೆನಪುಗಳ ಯಾತ್ರೆ (ಚುಟುಕು/ಹನಿಗವನಗಳ ಸಂಕಲನ), ನಮಗೂ ರೆಕ್ಕೆಗಳಿದ್ದಿದ್ದರೆ (ಮಕ್ಕಳ ಕವನ ಸಂಕಲನ) ಕೃತಿಗಳನ್ನು ರಚಿಸಿದ್ದಾರೆ. ಪರಿಸರ ದಿನಾಚರಣೆ, ನೇಕಾರರ ಬವಣೆಯ ಗೀತೆಗಳ ಕುರಿತು ಧ್ವನಿಸುರುಳಿ ಬಿಡುಗಡೆ ಮಾಡಿದ್ದಾರೆ.