ನವೋದಯ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಅಶ್ವತ್ಥ ಒಬ್ಬರು. ಅನೇಕ ಕತೆ, ಕಾದಂಬರಿ, ಪ್ರಬಂಧಗಳನ್ನು ರಚಿಸಿ ಚಲನಚಿತ್ರ ಲೋಕದಲ್ಲೂ ಇವರ ಕಾದಂಬರಿಗಳು ಜನಪ್ರಿಯವಾಗಿವೆ. ಮುನಿಯನ ಮಾದರಿ, ರಂಗನಾಯಕಿ, ಮರ್ಯಾದೆ ಮಹಲು ಕಾದಂಬರಿಗಳು ಚಲನಚಿತ್ರಗಳಾಗಿವೆ. ಪ್ರಚಾರಗಳಿಗೆ ಮಣಿಯದ ಕಾದಂಬರಿಕಾರ, ಕೂದುವಳ್ಳಿ ಅಶ್ವತ್ಥನಾರಾಯಣ ರಾವ್ ಅವರು, 179 ಕಥೆಗಳನ್ನು ಬರೆದು ಪ್ರಕಟಿಸಿದ ಕತೆಗಾರರು. ಆದರೆ ಸ್ವಲ್ಪವೂ ಪ್ರಚಾರದ ಬಗ್ಗೆ ಆಸಕ್ತಿಯಿಲ್ಲ. ತಮ್ಮ ಪಾಡಿಗೆ ತಾವು ಬದುಕುವ ಪ್ರವೃತ್ತಿ ಅವರು 1912 ಜೂನ್ 18 ರಂದು ಮೈಸೂರು ಜಿಲ್ಲೆಯ ಚಾಮರಾಜನಗರದಲ್ಲಿ ಜನಿಸಿದರು.
ನವೋದಯ ಸಂದರ್ಭದಲ್ಲಿ ಮಾಸ್ತಿಯವರ ಪ್ರೋತ್ಸಾಹದಿಂದ ಬರವಣಿಗೆಯನ್ನು ಆರಂಭಿಸಿದ ಅಶ್ವತ್ಥರು ಐದು ದಶಕಗಳ ಕಾಲ ಹಲವು ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಅಶ್ವತ್ಸರ ಬದುಕಿನ ಕೊನೆಯ ಮೂರು ದಶಕಗಳು ಸಾರಸ್ವತ ಚಟುವಟಿಕೆಗಳಿಂದ ತುಂಬಿತ್ತು. ಅಧ್ಯಯನ, ಚಿಂತನ, ಬರಹಗಳು ಸತತವಾಗಿ ಸಾಗಿದವು. ಇವರ 'ಹಂಬಲ' ಕಾದಂಬರಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ. ತರಗತಿಗಳಿಗೆ ಪಠ್ಯವಾಯಿತು. ಗಾಂಧಿವಾದಿ, ಖಾದಿಧಾರಿಗಳಾಗಿ ಸಾದಾ ಜೀವನ ಉಚ್ಛ ವಿಚಾರದವರಾಗಿ, ' ತನ್ನ ಗಳಿಕೆ ಸಾರ್ವಜನಿಕ ಉಪಯೋಗಕ್ಕೆ ಹೋಗಬೇಕೆ ಹೊರತು, ಸಾರ್ವಜನಿಕ ಹಣ ತನ್ನ ಉಪಯೋಗಕ್ಕಲ್ಲ' ಎಂದು ನಂಬಿ ನಡೆದವರು. 'ಮೂಗಿನ ಮೇಲೆಎಂಟು ಪ್ರಬಂಧಗಳ ಸಂಕಲನ, 'ಮಹಾಯುದ್ದ' ಖಂಡಕಾವ್ಯ. 'ನಿರ್ಮಲ' ಹುಚ್ಚ' 'ಕೃಷ್ಣಲೀಲಾ' 'ಕರೆ' 'ದಿವ್ಯ ದರ್ಶನ' 'ಮನು' 'ಕ್ರಾಂತಿ ಕಾರ' 'ಹಂಚಿಕೆ” “ಬಹುಮಾನ' 'ದ್ರೋಹ' 'ಹೆಣ್ಣು' 'ಅತಿಥಿ ದೇವೋಭವ' 'ನ್ಯಾಯಾಧೀಶ' `ಕೆಗಾರ' 'ಬಲಿ' 'ಮರುಭೇಟಿ” “ಚಿತ್ತೂರಿನ ಮುತ್ತಿಗೆ' 'ಮತ್ತೋಡಿನ ನಾಯಕರು' ಇತ್ಯಾದಿ ಹದಿನೆಂಟು ನಾಟಕಗಳನ್ನು ರಚಿಸಿದ್ದಾರೆ. ಇವರ ಅನೇಕ ಕೃತಿಗಳು ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಗಳಿಗೆ ಅನುವಾದ ಗೊಂಡಿವೆ. ಒಮ್ಮೆ ಜಾರಿಬಿದ್ದು ಸೊಂಟದ ಮೂಳೆಗೆ ಘಾತವಾಗಿ, ಸಾಂಕ್ರಾಮಿಕ ಜ್ವರದಿಂದಲೂ ನರಳಿ 16 ಜನವರಿ 1994ರಲ್ಲಿ ಇಹಲೋಕಯಾತ್ರೆ ಮುಗಿಸಿದರು.