ರಂಗ ಶಿಕ್ಷಕ ಬಿ. ಚಂದ್ರಶೇಖರ್ (ಜನನ: 16-05-1916) ಹಾಸನದವರು. ತಂದೆ ಬೆಳವಾಡಿ ರಾಮಸ್ವಾಮಯ್ಯ, ತಾಯಿ ಗುಂಡಮ್ಮ. ಹಾಸನ, ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ. ಇಂಗ್ಲಿಷ್‌ನಲ್ಲಿ ಬಿ.ಎ. (ಆನರ್ಸ್), ಎಂ.ಎ. ಪದವೀಧರರು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರು. ನಂತರ ತುಮಕೂರು, ಮೈಸೂರು, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ಗಳಲ್ಲಿ ಸೇವೆ. ಕರ್ನಾಟಕಕ್ಕೆ ಅನ್ವಯವಾಗುವಂತಹ ರಂಗ ಶಿಕ್ಷಣದ ಪಠ್ಯಕ್ರಮ ರೂಪಿಸಿದವರು. ಕನ್ನಡದ ಪ್ರಪ್ರಥಮ ಅಸಂಗತ ನಾಟಕ ’ಬೊಕ್ಕ ತಲೆಯ ನರ್ತಕಿ’, ತುಘಲಕ್, ಮೃಗಗಳಿಗಂಜಿದೊಡೆಂತಯ್ಯ, ಯಮಳ ಪ್ರಶ್ನೆ, ಅಪಕಾರಿ ಕಥೆ, ಚಿರಸ್ಮರಣೆ, ಮಣ್ಣಿನ ಬಂಡಿ (ಮೃಚ್ಛಕಟಿಕ). ಬೆಂಗಳೂರಿನ, ’ಲಿಟಲ್ ಥಿಯೇಟರ್ಸ್’ ಸ್ಥಾಪಕ ಸದಸ್ಯರು.
ಬಿ.ಎಲ್.ಟಿ. ತಂಡದ ಪ್ರಥಮ ನಾಟಕ ’ದಿ ಪ್ರಾಡಿಜಿಯಸ್ ಸ್ನಾಬ್’ನಲ್ಲಿ ಮಾನ್ಸಾಯರ್ ಬೊಲ್ಡಾನ ಎಂಬ ಪಾತ್ರವಹಿಸಿದ್ದರು. ಕನ್ನಡದಲ್ಲಿ ಅಭಿನಯಿಸಿದ ನಾಟಕಗಳು ಕಟ್ಟೆ ಪುರಾಣ, ಸಂತೆ ಸುದ್ದಿಯಲ್ಲಿ, ಟೊಳ್ಳುಗಟ್ಟಿ, ನಂಕಪ್ನಿ ಹೀಗೆ 20 ಕ್ಕೂ ಹೆಚ್ಚು ನಾಟಕಗಳು. ಇಂಗ್ಲಿಷ್ ನಾಟಕಗಳಲ್ಲೂ ಅಭಿನಯ, 30ಕ್ಕೂ ನಾಟಕಗಳ ನಿರ್ದೇಶನ, ಆಕಾಶವಾಣಿಗಾಗಿ ನಟಿಸಿದ ನಾಟಕಗಳು-ಸತ್ತವನ ಸಂತಾಪ, ಸ್ಮಶಾನ ಕುರುಕ್ಷೇತ್ರ, ರಕ್ತಾಕ್ಷಿ, ಬಿರುಗಾಳಿ, ನಿರ್ದಶಿಸಿದ್ದು- ಸಾಗರಕ್ಕೆ ಸವಾರರು. ಅಭಿನಯಿಸಿದ ಸಿನಿಮಾಗಳು- ಲಂಕೇಶರ ಅನುರೂಪ, ಎನ್. ಲಕ್ಷ್ಮೀ ನಾರಾಯಣ್‌ರ ಮುಯ್ಯಿ, ವಿಜಯ ಗುಜ್ಜಾರರ ಕುರಿದೊಡ್ಡಿ ಕುರುಕ್ಷೇತ್ರ TUSK OF YOUNG FILMS CORPORATION OF PARIS ನಲ್ಲಿ ಪ್ರಮುಖ ಪಾತ್ರ, ಸಂಚಯನ, ಸಂಭವಾಯಿ ಯುಗೇ ಯುಗೇ ಸೇರಿದಂತೆ ಸುಮಾರು 17 ನಾಟಕಗಳ ರಚನೆ. ಇವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕಾರ. 1991 ರಲ್ಲಿ ರಂಗಾಸಕ್ತರಿಂದ ಗೌರವ ಗ್ರಂಥ ’ಬಹುರೂಪಿ’ ಅರ್ಪಣೆ, ಇವರು 13-12-2000 ರಂದು ನಿಧನರಾದರು.