About the Author

ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಮೈಸೂರಿನವರು. ಭಾರತೀಯ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದವರು. ಜನನ: 1918ರ ಡಿಸೆಂಬರ್ 14 ರಂದು. ತಂದೆ ಕೃಷ್ಣಮಾಚಾರ್. ತಾಯಿ ಶೇಷಮ್ಮ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಬಡತನ ಕಾಡುತ್ತಿತ್ತು. ಯೋಗ ಗುರು ತಿರುಮಲೈ ಕೃಷ್ಣಮಾಚಾರ್‍ ಅವರ ಮನೆಯಲ್ಲೇ ಇದ್ದು ಯೋಗ ಕಲಿತರು. ಪುಣೆಯಲ್ಲಿ ಯೋಗಾಭ್ಯಾಸ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈವರೆಗೂ ಜಗತ್ತಿನ 40 ರಾಷ್ಟ್ರಗಳಲ್ಲಿ 180 ಯೋಗ ಕೆಂದ್ರಗಳನ್ನು  ತೆರೆದಿದ್ದಾರೆ. ತಮಗೆ 90 ವರ್ಷದ ಹುಟ್ಟುಹಬ್ಬದ ನಿಮಿತ್ತ ಅವರು ಮೈಸೂರು ಪ್ರಾಣಿ ಸಂಗ್ರಹಾಲಯ ಅಭಿವೃದ್ಧೀಗಾಗಿ ಸುಮಾರು 20 ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದರು. 

1966 ರಲ್ಲೇ ಅವರ ಪ್ರಥಮ ಪುಸ್ತಕ light on yoga ಪುಸ್ತಕವನ್ನು 17 ಭಾಷೆಗಳಲ್ಲಿ ತರ್ಜುಮೆಗೊಂಡು ಸುಮಾರು 10 ಲಕ್ಷ ಪ್ರತಿಗಳು ಮಾರಾಟವಾಗಿದ್ದು ದಾಖಲೆ. ಬೆಳ್ಳೂರಿನಲ್ಲಿ ಮೊದಲ ಬಾರಿಗೆ ಪತಾಂಜಲಿ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಿದರು. ಅವರು ಯೋಗ ಕುರಿತು ಇಂಗ್ಲಿಷ್, ಮರಾಠಿ ಹಾಗೂ ಕನ್ನಡದಲ್ಲೂ ಕೃತಿಗಳನ್ನು ರಚಿಸಿದ್ದಾರೆ. 

ಪ್ರಶಸ್ತಿಗಳು: ಪದ್ಮಶ್ರೀ (1991), ಪದ್ಮ ಭೂಷಣ (2002), ಪದ್ಮ ವಿಭೂಷಣ, (2004 ಲಭಿಸಿವೆ. ಮೂತ್ರಪಿಂಡದ ವೈಫಲ್ಯದಿಂದ ಅವರು 2014ರ ಆಗಸ್ಟ್ 20 ರಂದು ಪುಣೆಯಲ್ಲಿ ನಿಧನರಾದರು. ಆಗ ಅವರಿಗೆ 95 ವರ್ಷ ವಯಸ್ಸಾಗಿತ್ತು. 

ಬಿ.ಕೆ.ಎಸ್. ಅಯ್ಯಂಗಾರ್

(14 Dec 1918-20 Aug 2014)