About the Author

ಕನ್ನಡ ಪುಸ್ತಕಗಳ ಅಪ್ಪಟ ಓದುಗರಾದ ಬಿ.ಆರ್. ಸುಬ್ರಹ್ಮಣ್ಯ ಕನ್ನಡ ಸಾಹಿತ್ಯ ಪ್ರೇಮಿ. ಕಳೆದ ಹತ್ತು ವರ್ಷಗಳಿಂದ ಓದಿನ ಜೊತೆಜೊತೆಗೆ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಬರೆದ ಕಥೆ, ಕವಿತೆ ಮತ್ತು ಬಿಡಿ ಬರಹಗಳು ಪ್ರಜಾವಾಣಿ, ವಿಜಯವಾಣಿ, ಹಾಯ್ ಬೆಂಗಳೂರು ಸೇರಿದಂತೆ ರಾಜ್ಯ ಮಟ್ಟದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಚೊಚ್ಚಲ ಕೃತಿ “ಜೀವನವೇನೋ ದೊಡ್ಡದು...” 2015ರಲ್ಲಿ ಬಿಡುಗಡೆಯಾಗಿದೆ (ಪ್ರಕಾಶಕರು: ಸಿವಿಜಿ ಇಂಡಿಯಾ, ಬೆಂಗಳೂರು). ಇದು ಚಿಂತನಾತ್ಮಕ ಲೇಖನಗಳ ಸಂಗ್ರಹ. ಹಲವು ಉತ್ತಮ ಸಮಕಾಲೀನ ಮಾಹಿತಿಗಳು, ಜಿಜ್ಞಾಸೆ, ವಿಮರ್ಶೆ, ವಿಶ್ಲೇಷಣೆ, ಜನಗಳ ತಪ್ಪು ಗ್ರಹಿಕೆಗಳು ಮತ್ತು ಅವುಗಳ ಸರಿಪಡಿಸುವಿಕೆ, ಒಂದಷ್ಟು ಕುತೂಹಲ ಮತ್ತೊಂದಷ್ಟು ರಂಜನೆ ಈ ಎಲ್ಲವೂ ಈ ಕೃತಿಯಲ್ಲಿ ಅಡಕವಾಗಿವೆ. ಅವರ ಎರಡನೆಯ ಕೃತಿ “ಮಕುಮತ (ಕಥಾಸಂಕಲನ)” 2019ರಲ್ಲಿ ಬಿಡುಗಡೆಯಾಗಿದೆ (ಕಲ್ಲಚ್ಚು ಪ್ರಕಾಶನ, ಮಂಗಳೂರು). ಇದರಲ್ಲಿ ಹತ್ತು ವಿಭಿನ್ನ ಕಥೆಗಳು ಸಂಕಲಿತವಾಗಿವೆ. ಮೂಲತಃ ಭದ್ರಾವತಿಯವರಾದ ಬಿ.ಆರ್. ಸುಬ್ರಹ್ಮಣ್ಯ ಅವರು ಪ್ರತಿಷ್ಠಿತ ಇನ್ಶುರೆನ್ಸ್ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿ.ಆರ್. ಸುಬ್ರಹ್ಮಣ್ಯ