ಬಾ.ಹ. ರಮಾಕುಮಾರಿ ಅವರು ತುಮಕೂರು ಜಿಲ್ಲೆ ಬಾಣಸಂದ್ರದಲ್ಲಿ 1954 ಮೇ 2ರಂದು ಜನಿಸಿದರು. ತಾಯಿ ಬಸಮ್ಮ, ತಂದೆ ಬಿ.ಟಿ.ಎಚ್. ಗೌಡ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ಕವಿತೆ ರಚನೆ, ಲೇಖನಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಧ್ವನಿಗಳು, ಅನಾವರಣ, ಕಳೆದುಹೋಗಿದ್ದಾನೆ, ನಕ್ಕಾವು ಚುಕ್ಕಿ, ಅನಾಮಿಕ ಹಕ್ಕಿಯ ಸ್ವಗತ (ಕವನ ಸಂಕಲನಗಳು); ಧಗಧಗಿಸುವ ಆತ್ಮಗಳು, ಕನಸಿನಾಳದ ಕಣ್ಣು, ಮಿಳೆಯರ ಸ್ಥಾನಮಾನ ಮತ್ತು ಸಂಘಟನೆ (ಲೇಖನ ಸಂಕಲನ), ಹೀಗೊಂದು ಪ್ರೇಮದ ಕತೆ (ಕಥಾ ಸಂಕಲನ), ಅಕ್ಕಮಹಾದೇವಿ (ಜೀವನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ತುಮಕೂರು ಜಿಲ್ಲಾ ಘಟಕದ ಕರ್ನಾಟಕ ಲೇಖಕಿಯರ ಸಂಘದ ಮೊದಲ ಅಧ್ಯಕ್ಷರಾಗಿದ್ದ ಇವರಿಗೆ ಕರ್ನಾಟಕ ಲೇಖಕಿಯರ ಸಂಘದ ಬಹುಮಾನ ನೀಡಲಾಗಿದೆ.