About the Author

ಬಾ.ರಾ.ಗೋಪಾಲ (ಡಾ. ಬಾಲಕೃಷ್ಣನ್ ರಾಜಗೋಪಾಲ) ಪ್ರಾಚ್ಯ ಸಂಶೋಧನಾ ಕ್ಷೇತ್ರದಲ್ಲಿ ಪ್ರಸಿದ್ಧರು.  ಚಿಕ್ಕಬಳ್ಳಾಪುರದಲ್ಲಿ 1930ರ ಅಕ್ಟೋಬರ್ 21 ರಂದು ಜನಿಸಿದರು. ಪ್ರಾಥಮಿಕ ಹಾಗು ಮಾಧಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಹಾಗೂ ಇಂಟರ್‍ ಮೀಡಿಯೇಟ್ ನ್ನು ತುಮಕೂರಿನಲ್ಲಿ ನಂತರ ಮೈಸೂರು ವಿ.ವಿ.ಯಿಂದ ಎಂ.ಎ. ಹಾಗೂ 1964 ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ “ಕಲ್ಯಾಣ ಚಾಲುಕ್ಯರು ಮತ್ತು ಕಲಚೂರಿಗಳು” (ಇಂಗ್ಲಿಷ್‌ನಲ್ಲಿ) ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಪಡೆದರು. 

ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಿ ಅನೇಕ ಶಾಸನಗಳನ್ನು ಪತ್ತೆ ಮಾಡಿದ್ದು ಇವರ ಹೆಗ್ಗಳಿಕೆ. 1972ರವರೆಗೆ ಧಾರವಾಡ ಕವಿವಿಯಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗ ದಲ್ಲಿ ಇತಿಹಾಸವನ್ನು ಬೋಧಿಸಿದರು. ನಂತರ, 1982ರವರೆಗೆ ಮೈಸೂರು ವಿವಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಯ ದಕ್ಷಿಣ ಭಾರತ ಅಧ್ಯಯನ ವಿಭಾಗದ ಎಪಿಗ್ರಾಫಿಯಾ ಕರ್ನಾಟಿಕಾ -8 ಸಂಪುಟಗಳನ್ನು ಪರಿಷ್ಕರಿಸಿ ಪ್ರಕಟಿಸಿದರು.

ಡಾ. ಬಾ.ರಾ.ಗೋಪಾಲರು 15 ಶಾಸನ ಸಂಪುಟಗಳನ್ನು ಪ್ರಕಟಿಸಿದ್ದಾರೆ. ಇಂಗ್ಲಿಷ್ -೮ ಹಾಗೂ ಕನ್ನಡದಲ್ಲಿ -17 ಗ್ರಂಥಗಳನ್ನು ಮತ್ತು  ಇಂಗ್ಲಿಷನಲ್ಲಿ -7, ಕನ್ನಡದಲ್ಲಿ 1 ಗ್ರಂಥವನ್ನು ಸಂಪಾದಿಸಿದ್ದಾರೆ. ಇಂಗ್ಲಿಷnಲ್ಲಿ ಸುಮಾರು 60  ಹಾಗೂ ಕನ್ನಡದಲ್ಲಿ -78 ಲೇಖನಗಳನ್ನು ಬರೆದಿದ್ದಾರೆ. ಅವರು 16-06-1997 ರಂದು ನಿಧನರಾದರು. 

ಬಾ.ರಾ. ಗೋಪಾಲ್

(21 Oct 1930-16 Jun 1997)