About the Author

ತುಮಕೂರು ಬಳಿಯ ಬೆಳ್ಳಾವೆಯಲ್ಲಿ ವೆಂಕಟನಾರಣಪ್ಪನವರು ಜನಿಸಿದರು. ತಮ್ಮ ತರುಣ ವಯಸ್ಸಿನಲ್ಲಿ ಕರ್ನಾಟಕ ವಿಜ್ಞಾನ ಸಮಿತಿಯನ್ನು ಹುಟ್ಟು ಹಾಕಿದರು. ಉಪನ್ಯಾಸಗಳನ್ನು ನೀಡಿದರು. ವಿಜ್ಞಾನ ಪತ್ರಿಕೆಯನ್ನು ಹೊರತಂದರು. ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು. ಪರಿಷತ್ತಿನ ಕಾರ‍್ಯದರ್ಶಿಯಾಗಿ, ಕೋಶಾಕಾರಿಯಾಗಿ, ಅಹರ್ನಿಶಿ ದುಡಿದರು. ಪ್ರಾಧ್ಯಾಪಕ ವೃತ್ತಿಯಿಂದ ಉಂಟಾದ ಮನಃಕ್ಲೇಶದಿಂದ ರಾಜೀನಾಮೆ ನೀಡಿ ವ್ಯವಸಾಯ ವೃತ್ತಿ ಹಿಡಿದರು. ಬೇಸರವಾಗಿ ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಗುಡಿಯ ಜೀರ್ಣೋದ್ಧಾರ, ದೊಡ್ಡ ಬಸವಣ್ಣ, ದೊಡ್ಡ ಗಣಪತಿ, ಚಾಮರಾಜಪೇಟೆಯ ರಾಮೇಶ್ವರನ ಗುಡಿ, ಗವಿಗಂಗಾಧರೇಶ್ವರನ ದೇವಸ್ಥಾನಗಳ ಧರ್ಮದರ್ಶಿಯಾಗಿದ್ದರು. ಮುಲಕನಾಡು ಸಂಘದ ಅಧ್ಯಕ್ಷರಾಗಿ, ಅಗ್ರಿಕಲ್ಚರ್ ಅಂಡ್ ಎಕ್ಟಿವ್‌ಮೆಂಟ್ ಯೂನಿಯನ್ ಸದಸ್ಯರಾಗಿ, ಮೈಸೂರು-ತಮಿಳುನಾಡಿನ ಕಾವೇರಿ ನೀರಿನ ಹಂಚಿಕೆಯ ನಿಷ್ಪಕ್ಷಪಾತ ತೀರ್ಪು ಕೊಡಲು ನೇಮಿಸಿದ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 

ಕನ್ನಡ ಐದನೆಯ ಪುಸ್ತಕ, ಗುಣಸಾಗರ, ಜೀವವಿಜ್ಞಾನ, ಸ್ವತಂತ್ರ ಕೃತಿಗಳು. ಶಬ್ದಮಣಿ ದರ್ಪಣ, ಪಂಪಭಾರತ, ಪಂಪರಾಮಾಯಣ, ಇವುಗಳ ನಿಘಂಟು ಮತ್ತು ಗದ್ಯಾನುವಾದ, ಚಾವುಂಡರಾಯ ಪುರಾಣ, ಸೋಮೇಶ್ವರ ಶತಕ, ಕುಸುಮಾಳಿ ಕಾವ್ಯ ಮುಂತಾದವುಗಳು ಕೃತಿಗಳನ್ನು ಸಂಪಾದಿಸಿದ್ದಾರೆ. 1937ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಮೈಸೂರು ಮಹಾರಾಜರಿಂದ ೧೯೪೦ರಲ್ಲಿ ದೊರೆತ ರಾಜಸೇವಾಸಕ್ತ ಬಿರುದು-ಮುಂತಾದ ಗೌರವಗಳು ಸಂದುವು. ನಿಧನರಾದದ್ದು 1943 ಆಗಸ್ಟ್ 3 ರಲ್ಲಿ.

ಬೆಳ್ಳಾವೆ ವೆಂಕಟನಾರಣಪ್ಪ

(10 Feb 1871-03 Aug 1943)