About the Author

ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ 16ನೇ ಸೆಪ್ಟೆಂಬರ್ 1956 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಜನಿಸಿದರು. “ಮುಗುಳು, ನಕ್ಕು ಹಗುರಾಗಿ, ಎಂಥದ್ದು ಮಾರಾಯ್ದೆ, ವಲಲ ಪ್ರತಾಪ, ಹಾಸಭಾಸ, ಮೃಗಯಾ ವಿನೋದ, ಬೆಟ್ಟದ ಭಾಗೀರಥಿ, ಮಾತಾಡಲು ಮಾತೇಬೇಕೆ, ಪುಟ್ಟಿಯ ಪಟ್ಟೆ ಹುಲಿ, ಕೈಗುಣ ಬಾಯ್ದುಣ, ಬೆಸ್ಟ್ ಆಫ್ ಭು.ಹೆ.” ಅವರ ಪ್ರಮುಖ ಹಾಸ್ಯ ಕೃತಿಗಳು.

“ಧಾರವಾಡ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ, ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಡಾ. ಸುಧಾ ಮೂರ್ತಿ ಪ್ರಶಸ್ತಿಗಳು ಲಭಿಸಿವೆ. 

ಭುವನೇಶ್ವರಿ ಹೆಗಡೆ

(16 Sep 1956)