About the Author

ಇತಿಹಾಸ ತಜ್ಞ, ವಿದ್ವಾಂಸರಾಗಿದ್ದ ಸಿ. ಹಯವದನರಾವ್‌ ಅವರು ಜನಿಸಿದ್ದು 1865 ಜುಲೈ 10ರಂದು ತಮಿಳುನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ ಜನಿಸಿದರು. ಮದರಾಸಿನ ಪ್ರೆಸಿಡೆನ್ಸಿ ಮತ್ತು ಕ್ರಿಶ್ಚಿಯನ್‌ ಕಾಲೇಜಿನಿಂದ ಬಿ.ಎ. ಮತ್ತು ಎಲ್‌ಎಲ್‌ಬಿ ಪದವಿ ಪಡೆದ ಇವರು ಮದರಾಸಿನ ವಸ್ತು ಸಂಗ್ರಹಾಲುದಲ್ಲಿ ಕ್ಯೂರೇಟರಾಗಿ ವೃತ್ತಿ ಆರಂಭಿಸಿದರು. ಕಾಲೇಜು ದಿನಗಳಿಂದಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದ ಇವರು ಮದರಾಸ್‌ ಟೈಮ್ಸ್‌ ಪತ್ರಿಕೆಯಲ್ಲಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ದಿ ಲೀಡರ್‌, ದಿ ಮೈಸೂರು ಎಕನಾಮಿಕಲ್‌ ಜರ್ನಲ್‌ ಸಂಪಾದಕತ್ವವನ್ನು ವಹಿಸಿದ್ದರು.

ಬಹುಭಾಷಾ ವಿದ್ವಾಂಸರಾಗಿದ್ದ ಇವರು ಇಂಗ್ಲಿಷ್‌, ಲ್ಯಾಟಿನ್‌, ಫ್ರೆಂಚ್‌, ರ್ಜನ್‌, ಸಂಸ್ಕೃತ, ಕನ್ನಡ, ತೆಲುಗು, ಮರಾಠಿ, ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬೆಂಗಳೂರು ಪುರಸಭೆಯ ಚುನಾಯಿತ ಪ್ರತಿನಿಧಿಯಾಗಿ ಮೂಸೂರು ನ್ಯಾಯ ವಿಧಾಯಕ ಸಭೆ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದಾರೆ. ಗೆಜೆಟಿಯರ್ಸ್‌ ಪ್ರಮಾಣಪೂರ್ವಕ ಗ್ರಂಥಗಳು, ಮೂಸೂರು ಗೆಜೆಟಿಯರ್ಸ್‌, ಹಿಸ್ಟರಿ ಆಫ್‌ ಮೈಸೂರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ರಾವ ಸಾಹೇಬ್‌, ರಾವ್‌ ಬಹದ್ದೂರ್‌ ಹಾಗೂ ರಾಜ ಚರಿತ ವಿಶಾರದ ಮುಂತಾದ ಪ್ರಶಸ್ತಿಗಳು ಸಂದಿವೆ. ಇವರು 1946 ವರ್ಷದ ಜನವರಿ 27ರಲ್ಲಿ ನಿಧನರಾದರು.

ಸಿ. ಹಯವದನರಾವ್‌

(10 Jul 1865-01 Mar 1946)