About the Author

ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ 1896ರ  ಡಿಸೆಂಬರ್ 10 ರಂದು ಜನಿಸಿದ ಸಿ.ಕೆ.ವೆಂಕಟರಾಮಯ್ಯ ಅವರು ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ.ಅವರ ಪುತ್ರರು. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ, ಮುಂಬಯಿಯಲ್ಲಿ ಎಂ.ಎ,  ಹಾಗೂ ಎಲ್.ಎಲ್.ಬಿ ಪದವಿ ಪಡೆದರು.

ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ, ನಂತರ  ಮೈಸೂರು ಸರಕಾರದ ಭಾಷಾಂತರ ಇಲಾಖೆಯಲ್ಲಿ ಸೇವೆ, ತದನಂತರ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾದರು.

ಕಥಾಸಂಕಲನ: ಹಳ್ಳಿಯ ಕಥೆಗಳು, ತುರಾಯಿ ನಾಟಕ: ಸುಂದರಿ, ನಚಿಕೇತ, ಮಂಡೋದರಿ, ನಮ್ಮ ಸಮಾಜ, ಬ್ರಹ್ಮವಾದಿ, ಮತ್ತು  ಭಾಸ ಹಾಗೂ ಕಾಳಿದಾಸರ ಕೃತಿಗಳ ಬಗೆಗೆ ವಿಮರ್ಶೆ ಬರೆದಿದ್ದಾರೆ. ಬುದ್ಧ, ಪೈಗಂಬರ, ಲಿಂಕನ್, ಹರ್ಷವರ್ಧನ ಕುರಿತು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.

ಪುರಸ್ಕಾರಗಳು: ಮೈಸೂರು ಸರಕಾರದಿಂದ ‘ರಾಜಸೇವಾಸಕ್ತ’ ಪುರಸ್ಕಾರವನ್ನು ಹಾಗು ಕೇಂದ್ರ ಸರಕಾರದಿಂದ ‘ ಪದ್ಮಶ್ರೀ’ ಪ್ರಶಸ್ತಿಯನ್ನು ಪಡೆದಿದ್ದಾರೆ. 1947ರಲ್ಲಿ ಹರಪನಹಳ್ಳಿಯಲ್ಲಿ ಜರುಗಿದ 30ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು1973ರ ಏಪ್ರಿಲ್ 03 ರಂದು ನಿಧನರಾದರು.

ಸಿ.ಕೆ.ವೆಂಕಟರಾಮಯ್ಯ

(10 Dec 1896-03 Apr 1973)