About the Author

ಸಿ. ಎನ್. ಆರ್. ರಾವ್ ಎಂದೇ ಪ್ರಸಿದ್ದರಾದ 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜನನ: 30-06-1934) ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರು. ಬೆಂಗಳೂರಿನ ಜವಾಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ ಮುಖ್ಯಸ್ಥರು. 2013 ರಲ್ಲಿ ಭಾರತದ ಅತ್ಯುನ್ನತ ಗೌರವ'ಭಾರತ ರತ್ನ' ಪ್ರಶಸ್ತಿ ಸಂದಿದೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ (1955) ಪದವಿ ಪಡೆದರು. "ಅವರ ಮೇಲೆ ಪ್ರಭಾವ ಬೀರಿದ ವಿಜ್ಞಾನಿ ಸರ್‌ ಸಿ ವಿ ರಾಮನ್‌. ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ (1953)ವಿ.ವಿ.ಯಲ್ಲಿ ಪಡೆದರು. 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ (1958) ಪಿ.ಎಚ್‌.ಡಿ. ಪಡೆದರು. ಬೆಂಗಳೂರಿನ ಭಾರತೀಯ (1959)ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾದರು. ನಂತರ 1963ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು. ಇವರು 'ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗ'ದ ಸಂಶೋಧನೆಗೆ ವಿಶ್ವ ಖ್ಯಾತಿ ಪಡೆದಿದ್ದಾರೆ ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರೂ ಆಗಿದ್ದರು.

ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. 42ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು 1500ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ 140ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ.ಪಡೆದಿದ್ದಾರೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್) ಪಡೆಯದೆ ಮುಕ್ತವಾಗಿಟ್ಟಿದ್ದಾರೆ.

ಅವರು ಅಮೇರಿಕಾಗೆ ಸ್ಥಳಾಂತರಗೊಂಡ ನಂತರ ಪ್ರಕಟಿಸಿದ್ದ ಪುಸ್ತಕಗಳು ಜೆ ಕ್ಲೆಫ್ಫೆ ಜೊತೆ- ವ್ಯತ್ಯಾಸದ ಭಾಗಗಳು ಮತ್ತು ಅದರ ಅನ್ವಯಗಳ ಅಂದಾಜು (1988)  ಅಂಕಿಅಂಶ ಮತ್ತು ಸತ್ಯ (1989), ಡಿ ಎನ್ ಶಾನಭಾಗ್ ಜೊತೆ- ಅನ್ವಯಗಳೊಂದಿಗೆ ಸಂಭವನೀಯ ಮಾದರಿಗಳು, ಚೊಕೆಟ್-ಡಿನೈ ರೀತಿಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ಅದರ ಅನ್ವಯಗಳು (1994) ಎಚ್ ಟೊಟೆಂಬರ್ಗ್ ಜೊತೆ- ಲೀನಿಯರ್ ಮಾದರಿಗಳು, ಕನಿಷ್ಠ ಚೌಕಗಳು ಮತ್ತು ಪರ್ಯಾಯ (1995) ಮತ್ತು ಎಂ ಬಿ ರಾವ್ ಜೊತೆ- ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಮ್ಯಾಟ್ರಿಕ್ಸ್ ಬೀಜಗಣಿತದ ಅನ್ವಯಗಳು (1998) ಸೇರಿವೆ.

ಪ್ರಶಸ್ತಿ-ಗೌರವಗಳು: ಭಾರತ ರತ್ನ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು, ಅಮೆರಿಕಾ ಸಂಯುಕ್ತ ಸಂಸ್ಥಾನದ ನ್ಯಾಷನಲ್ ಆಕಾಡೆಮಿ ಆಪ್ ಸೈನ್ಸ್ ಹಾಗೂ ಅಮೆರಿಕನ್ ಆಕಾಡೆಮಿ ಆಪ್ ಆರ್ಟ್ ಅಂಡ್ ಸೈನ್ಸ್ ನ ಸದಸ್ಯರು, ಲಂಡನ್ ರಾಯಲ್ ಸೊಸೈಟಿಯ ಸದಸ್ಯರು, ಫ್ರಾನ್ಸ್ ಅತ್ಯುನ್ನತ ನಾಗರಿಕ ಪುರಸ್ಕಾರ, ಯುನೆಸ್ಕೋ ಹಾಗೂ ಪ್ಯಾರಿಸ್ ನಿಂದ ಕೊಡಲಾಗುವ ಅಲ್ಬರ್ಟ್ ಐನ್ ಸ್ಟೈನ್ ಚಿನ್ನದ ಪದಕ ಪಡೆದಿದ್ದಾರೆ.ಈವರೆಗೆ ಇವರಿಗೆ 37 ಗೌರವ ಡಾಕ್ಟರೇಟ್ ಗಳು ದೊರೆತಿವೆ. ಹೀಗೆ ಇವರಿಗೆ ಸಂದ ಗೌರವ-ಪ್ರಶಸ್ತಿಗಳ ಪಟ್ಟಿ ಮುಂದುವರಿಯುತ್ತದೆ.

ಸಿ.ಎನ್.ಆರ್. ರಾವ್

(30 Jun 1934)