About the Author

ಲೇಖಕ ಸಿ. ಆರ್. ಗೋಪಾಲ್ ಅವರು 01 ಜನವರಿ 1953ರಲ್ಲಿ ಜನಿಸಿದರು.  ತಂದೆ- ಸ್ವಾತಂತ್ರ್ಯ ಹೋರಾಟಗಾರ, ಆದರ್ಶ ರೈತ ಸಿ.ಕೆ. ರಾಮಾಚಾರ್, ತಾಯಿ ಇಂದಿರಾಬಾಯಿ. 1974 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.  

ರೈತ ಮಕ್ಕಳ ತರಬೇತಿ ಕೇಂದ್ರ, ಧಡೇಸೂಗೂರು, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆಯಲ್ಲಿ ಕೃಷಿ ತರಬೇತಿಯನ್ನು ಪಡೆದು ಮದ್ರಾಸ್ ಸಮಾಜಕಾರ್ಯ ಶಾಲೆ, ಮದ್ರಾಸ್ ವಿಶ್ವವಿದ್ಯಾಲಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ನಿವೃತ್ತಿ ಹೊಂದಿದ್ಧಾರೆ.

‘ಸಂಪಾದಕೀಯ -ಛೇಂಜ್ ಅಂಡ್ ಡೆವಲಪ್‍ಮೆಂಟ್ ಇನ್ ಲಂಬಾಣಿ ಸೊಸೈಟಿ, ಉತ್ಕ್ರಾಂತಿಯತ್ತ ಲಂಬಾಣಿಗಳು, ಸಮಾಜಕಾರ್ಯ ಸಿದ್ಧಾಂತ - ಶರಣರ ಮತ್ತು ದಾಸರ ಜೀವನ ದೃಷ್ಟಿ-ಒಂದು ತೌಲನಿಕ ಚಿಂತನೆ, ಸನ್ಮಾರ್ಗ, ಸಮುದಾಯ ಸಂಘಟನೆ, ಭಾಷಣ ಕೈಪಿಡಿ, ನವಸಾಕ್ಷರ ಮಾಲೆ ಪುಸ್ತಕಗಳು : ನಮ್ಮೂರಿಗೂ ಬಂತು ಸಹಕಾರಿ ಸಂಘ, ಗ್ರಾಮೀಣ ಬ್ಯಾಂಕ್, ಹಿಪ್ಪುನೇರಳೆ ಬೇಸಾಯ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಅವರ ಸಂಪಾದಕೀಯದಲ್ಲಿ ಅಕ್ಷರ ವಿಜಯವಾಣಿ - ಪಾಕ್ಷಿಕ-ಒಂದು ವರ್ಷ, ಸಮಾಜಕಾರ್ಯದ ಹೆಜ್ಜೆಗಳು-ತ್ರೈಮಾಸಿಕ ಪ್ರಕಟವಾಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯ ಅಧ್ಯಕ್ಷತೆ, ಪ್ರಬಂಧ ಮಂಡನೆ, ಆಕಾಶವಾಣಿ (ಹೊಸಪೇಟೆ)ಯಲ್ಲಿ ಚಿಂತನವಾಚನ, ಸಮಾಜಕಾರ್ಯ ವಿಶ್ವಕೋಶ-ಲೇಖನದ ಭಾಷಾಂತರ, ಗ್ರಾಮೀಣಾಭಿವೃದ್ಧಿ, ನಾಯಕತ್ವ, ಸಾಕ್ಷರತೆ, ದಾಸ ಸಾಹಿತ್ಯ, ಶರಣ ಸಾಹಿತ್ಯ, ಬುಡಕಟ್ಟು ಜನಾಂಗಗಳ ಅಭಿವೃದ್ಧಿ, ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಗ್ರಂಥಗಳು, ಗಾಂಧೀವಾದ ಕುರಿತ ವಿಷಯಗಳ ಮೇಲೆ ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ಧಾರೆ.

ಸಿ. ಆರ್. ಗೋಪಾಲ್

(01 Jan 1953)