About the Author

ರಂಗಕರ್ಮಿ, ಲೇಖಕ ಡಾ. ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ (31-07-1958) ಗ್ರಾಮದವರು. ತಂದೆ- ಡಿ.ಎಸ್. ಬಸಟ್ಟಪ್ಪ, ತಾಯಿ- ಸಿ.ಆರ್. ಮಂಗಳಗೌರಮ್ಮ. ಕನ್ನಡ ಎಂ.ಎ ಪದವೀಧರರು. ಎಂ.ಪಿ.ಎ.ಎಂ.ಫಿಲ್(ಜಾನಪದ ರಂಗಭೂಮಿ) ಹಾಗೂ ಅಭಿನಯ ತರಂಗದ (ರಂಗಶಿಕ್ಷಣ) ಡಿಪ್ಲೊಮಾ ಪಡೆದಿದ್ದಾರೆ. 1976ರಲ್ಲಿ ನಾಗಮಂಗಲದ ಉದಯಭಾನು ಕಲಾಸಂಘದ ‘ಸಂಚು ಹೂಡಿದ ಸಿಂಹ’ ನಾಟಕದ ಮೂಲಕ ರಂಗಪ್ರವೇಶ ಮಾಡಿದರು. 19881ರಲ್ಲಿ ಅಭಿನಯ ತರಂಗ ಸೇರಿ, ‘ಕೋತಿಕತೆ’, ‘ಜನಮರುಳೋ’, ‘ಮಾ ನಿಷಾಧ’, ‘ಚಿರಸ್ಮರಣೆ’, ‘ಕಿಂಗ್ ಲಿಯರ್’, ‘ಟೊಳ್ಳುಗಟ್ಟಿ’, ‘ಪ್ರತಿಜ್ಞಾ ಯೌಗಂಧರಾಯಣ’ ಹಾಗೂ ಬೆಂಗಳೂರಿನ ಇತರ ತಂಡಗಳಲ್ಲಿ 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 40ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದ ಸಂಘಟಕರಾಗಿಯೂ ಕೆಲಸ ಮಾಡಿದ್ದು, 2005ರಿಂದ 2008ರ ಅವಧಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದರು. ರಂಗಭೂಮಿ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದು, ಆಲಿಕಲ್ಲು, ಎಲ್. ಕೃಷ್ಣಪ್ಪ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 

ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ

(31 Jul 1958)