About the Author

ಡಾ. ಡಿ.ವಿ.ಪರಮಶಿವಮೂರ್ತಿ, ಶಾಸನತಜ್ಞರು ಹಾಗೂ ಸಂಶೋಧಕರು. ತುಮಕೂರು ವಿ.ವಿ.ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಹೆಜ್ಜಾಜಿಯಲ್ಲಿ 1963ರಲ್ಲಿ ಜನಿಸಿದರು. ಬೆಂಗಳೂರು ವಿ.ವಿ.ಯಿಂದ ಎಂ.ಎ. ಕನ್ನಡ ಪದವೀಧರರು. ’ಕನ್ನಡ ಶಾಸನಶಿಲ' ಎಂಬ ಪ್ರೌಢಪ್ರಬಂಧಕ್ಕೆ ಪಿಎಚ್.ಡಿ.ಪಡೆದಿದ್ದಾರೆ. 

ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಬೋಧನಾಮಂಡಳಿ ಹಾಗೂ ಆಡಳಿತ ಮಂಡಳಿ ಸದಸ್ಯರಾಗಿ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕುಲಸಚಿವರಾಗಿ, ನಿರ್ದೆಶಕರಾಗಿ ವಿವಿಧ ಅಧ್ಯಯನ ಮಂಡಳಿಗಳಲ್ಲಿ  ತೊಡಗಿಸಿ ಕೊಂಡಿದ್ದಾರೆ. ಶಾಸನ ಸಂಶೋಧನೆ, ಪ್ರೌಢದೇವರಾಯನ ಶಾಸನಗಳು, ಕೃಷ್ಣದೇವರಾಯನ ಶಾಸನಗಳು, ನೊಳಂಬರ ಶಾಸನಗಳು, ತುಮಕೂರು ಜಿಲ್ಲೆ ಶಾಸನ ಸಮೀಕ್ಷೆ ಹಾಗೂ ಜಿಲ್ಲಾವಾರು ಶಾಸನ ಸಂಪುಟಗಳನ್ನೊಳ ಗೊಂಡಂತೆ 25ಕ್ಕೂ ಹೆಚ್ಚಿನ ಗ್ರಂಥಗಳನ್ನು ಸಂಪಾದಿಸುವುದ ರೊಂದಿಗೆ 70ಕ್ಕೂ ಹೆಚ್ಚಿನ ಶಾಸನ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

 ಕರ್ನಾಟಕದ ಇತಿಹಾಸ ಮತ್ತು ಶಾಸನ ಸಂಶೋಧನಾ ಕ್ಷೇತ್ರದಲ್ಲಿ  ತೊಡಗಿಸಿಕೊಂಡಿರುವ ಇವರಿಗೆ ಡಾ. ಶಿವಕುಮಾರಸ್ವಾಮಿ, ಡಾ. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಒಳಗೊಂಡು ಅನೇಕ ಗೌರವಗಳು ಸಂದಿವೆ. ಕರ್ನಾಟಕ ಇತಿಹಾಸ ಅಕಾಡೆಮಿಯ 'ಡಾ. ಬಾ.ರಾ. ಗೋಪಾಲ ಶಾಸನ' ಪ್ರಶಸ್ತಿ ಹಾಗೂ 'ನೊಳಂಬಶ್ರೀ' ಪ್ರಶಸ್ತಿ, ಹಾಗೂ ಇವರ ನೊಳಂಬರ ಶಾಸನಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

ಡಿ.ವಿ. ಪರಮಶಿವಮೂರ್ತಿ

Awards