About the Author

ದಾಮಿನಿ ರಂಗಸ್ವಾಮಿ 1992 ಜನವರಿ 11 ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿ ಜನಿಸಿದರು. ತಂದೆ ಪ್ರೊ.ಎಂ.ಜಿ.ರಂಗಸ್ವಾಮಿ ತಾಯಿ ಕವಿತಾ. ಹಿರಿಯೂರಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ, ಧಾರವಾಡದ ಜನತಾ ಶಿಕ್ಷಣ ಸಂಸ್ಥೆ (ಎಸ್‌ಡಿಎಂ)ನಲ್ಲಿ ಪದವಿ (ಬಿ.ಎ.), ಧಾರವಾಡ ವಿಶ್ವವಿದ್ಯಾಲಯದ ಆರ್.ಸಿ.ಹಿರೇಮಠ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶಾಲಾ ದಿನಗಳಲ್ಲಿ ಕನ್ಯಾಕುಮಾರಿಯಿಂದ ಭಾರತ - ಪಾಕಿಸ್ತಾನದ ವಾಘಾ ಗಡಿಯವರೆಗೆ ಪ್ರವಾಸ, ವಾಘಾ ಗಡಿಯಲ್ಲಿ ಪ್ರತಿದಿನ ಸಂಜೆ ಜರುಗುವ ಮಿಲಿಟರಿ ಕವಾಯಿತುನಲ್ಲಿ ಭಾಗವಹಿಸಿ ರಾಷ್ಟ್ರಧ್ವಜ ಹಿಡಿದ ಗೌರವ ಅವರದ್ದು. 2007ರಲ್ಲಿ ಬೆಂಗಳೂರಲ್ಲಿ ಬಿ.ಎಸ್.ಎನ್.ಎಲ್ ಏರ್ಪಡಿಸಿದ್ದ ಮ್ಯಾರಾಥಾನ್ ಓಟದಲ್ಲಿ ಭಾಗಿ. 'ಮೊಗ್ಗಿನ ಮನಸು' ದಾಮಿನಿ ಅವರ ಚೊಚ್ಚಲ ಕೃತಿ.

 

ದಾಮಿನಿ ರಂಗಸ್ವಾಮಿ

(11 Jan 1994)