About the Author

ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನಸೂಯಾದೇವಿ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ತಂದೆ ದಕ್ಷಿಣ ಕನ್ನಡ ಮೂಲದವರಾದ ತಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ. ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ ಎಂ.ಎ. ಪದವಿ ಪಡೆದರು. ಬೋಧನಾ ವೃತ್ತಿ ಆಯ್ದುಕೊಂಡಿರುವ ಅನುಸೂಯದೇವಿ ಅವರು ಪ್ರಸ್ತುತ ಬೆಂಗಳೂರಿನ ಬಿ.ಎಚ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ  ಅವರು ವಿಭಾಗದ ಮುಖ್ಯಸ್ಥೆ ಕೂಡ.

ಶಾಲಾ ಕಾಲೇಜು ದಿನಗಳಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಅನುಸೂಯಾದೇವಿ ಅವರು ಬಾಲ ಕಲಾವಿದೆಯಾಗಿ ಆಕಾಶವಾಣಿಯ ಹಲವಾರು ಕಾರ‍್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ (ಹಾಡುಗಾರಿಕೆ) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣತೆ ಹೊಂದಿರುವ ಅವರು, ಲಘು ಸಂಗೀತ ಕ್ಷೇತ್ರ, ವಿಣಾವಾದನ, ಕೀಬೋರ್ಡ್‌‌ನಲ್ಲಿಯೂ ಪ್ರಾವಿಣ್ಯತೆ ಪಡೆದಿದ್ದಾರೆ.

ಮಲ್ಲಿಗೆಹೂ, ಉರಿಯ ಬೇಲಿ (ಕತಾ ಸಂಕಲನ), ಪ್ರಕೃತಿ ಪುರುಷ, ಅಮ್ಮ,  ನಿನ್ನ ನೆನಪಿಗೆ, ಕೇಶವ ನಮನ, ಅನನ್ಯ ( ಕವನ ಸಂಕಲನಗಳು), ರಾಬಿನ್ ಕುಕ್‌ರವರ ಫೀವರ್ ಕಾದಂಬರಿ ‘ಸಂಕಟವೇ ನಿಲ್ಲು, ಸಾಧನೆಯಾಗು’ ಎಂಬ ಹೆಸರಿನಲ್ಲಿ ತರಂಗ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಸ್ವತಂತ್ರ ಕಾದಂಬರಿ ‘ಆಕಾಶದ ಹಾಡು’ ಕರ್ಮವೀರದಲ್ಲಿ ಪ್ರಕಟವಾಗಿದೆ.

ಪ್ರಕೃತಿ-ಪುರುಷ ಕವನ ಸಂಕಲನಕ್ಕೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಉರಿಯ ಬೇಲಿ ಕತಾ ಸಂಕಲನಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ವಿಶ್ವಮಾನ್ಯ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ, ಕುವೆಂಪುಶ್ರೀ ಪ್ರಶಸ್ತಿ ಸಂದಿವೆ. 

ಡಾ. ಅನುಸೂಯಾದೇವಿ

(31 Oct 1949)

BY THE AUTHOR