About the Author

ಶ್ರೀ ಶ್ರೀಧರರ ಭಕ್ತರಾಗಿದ್ದ ಅವರು ಆ ಕಾಲದಲ್ಲಿ ಕನ್ನಡ ಓದುಗರಿಗೆ ತಮ್ಮ ಗುರುಗಳ ಬಗ್ಗೆ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದರು. ಆಧ್ಯಾತ್ಮ ವಿಷಯಗಳ ಬಗ್ಗೆ ‘ಸದ್ಬೋಧ ಚಂದ್ರಿಕೆ’, ‘ಶಂಕರ ಭಾಸ್ಕರ’ ನಿಯತಕಾಲಿಗಳಲ್ಲಿ ಗಂಭೀರ ಲೇಖನಗಳನ್ನು ಮಂಡನೆ ಮಾಡಿದ್ದರು. ಅಷ್ಟೇ ಉತ್ಸುಕತೆಯಿಂದ ‘ವಿನೋದ’ ಮಾಸಪತ್ರಿಕೆಗೆ ಹಾಸ್ಯ ಲೇಖನಗಳನ್ನೂ ಬರೆದಿದ್ದರು. ಶಿಶು ಸಾಹಿತ್ಯದ ಬಗ್ಗೆ ಅಪಾರ ಪ್ರೇಮವಿದ್ದ ಅವರು ‘ಸಚಿತ್ರ ರಾಮಾಯಣ’, ‘ಬಾಲ ಮಹಾಭಾರತ’, ‘ಮಕ್ಕಳ ಕತೆಗಳು’ ಪುಸ್ತಕಗಳನ್ನು ರಚಿಸಿ ಸ್ವತಃ ಪ್ರಕಟಿಸಿದ್ದರು. ಅವರ ಇನ್ನಿತರ ಪ್ರಕಟಿತ ಕೃತಿಗಳೆಂದರೆ ‘ಶ್ರೀ ಶ್ರೀಧರ ಚರಿತ್ರೆ’, ‘ದತ್ತಾತ್ರೇಯ’ ಮತ್ತು ‘ಅಸೇತು ಹಿಮಾಚಲ ಯಾತ್ರೆ (ಪ್ರವಾಸ ಕಥನ)’.

ಜಿ.ಎ.ನರಸಿಂಹಮೂರ್ತಿ