About the Author

ಗುರುನಾಥ ಧುಂಡಭಟ್ಟ ಜೋಶಿ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿಯವರು. (ಜನನ: 20 -08-1933) ತಂದೆ ಧುಂಡಭಟ್ಟ, ತಾಯಿ ರಮಾಬಾಯಿ.  ಪ್ರಾರಂಭಿಕ ಶಿಕ್ಷಣ ಬೆಳ್ಳಟ್ಟಿ, ಸೂರಣಗಿಯಲ್ಲಿ ನಡೆಯಿತು. ಮುಂಬಯಿಯ ರಾಮನಾರಾಯಣ ರೂಯಾ ಕಾಲೇಜಿನಿಂದ ಬಿ.ಎ, ಮುಂಬಯಿ ವಿ.ವಿ.ಯಿಂದ ಎಂ.ಎ, ಸೇಂಟ್‌ ಝೇವಿಯರ್ ಇನ್‌ಸ್ಟಿಟ್ಯೂಟ್‌ ಆಫ್‌ ಎಜುಕೇಷನ್‌ನಿಂದ ಬಿ.ಎಡ್‌, ಪದವೀಧರರು. “ಹುಯಿಲಗೋಳ ನಾರಾಯಣರಾಯರ ಜೀವನ ಸಾಧನೆ” ಇವರ ಪಿಎಚ್ ಡಿ ಮಹಾಪ್ರಬಂಧ.  ಪ್ರೌಢಶಾಲಾ ಶಿಕ್ಷಕರಾಗಿ ಹಂತಹಂತವಾಗಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ, ಯಂಗ್‌ ಮೆನ್ಸ್‌ ಹೈಸ್ಕೂಲು ನಂತರ ರೂಪರೇಲ್‌ ಮತ್ತು ಝನ್‌ಝನ್‌ ವಾಲಾ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಝನ್‌ಝನ್‌ ಕಾಲೇಜಿನ ಪ್ರಾಂಶುಪಾಲರಾಗಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಮುಂಬಯಿ ವಿ.ವಿ. ಕನ್ನಡ ಅಭ್ಯಾಸ ಮಂಡಳಿ, ಅಕಾಡಮಿಕ್‌ ಕೌನ್ಸಿಲ್‌, ರಾಜ್ಯ ಪಠ್ಯಪುಸ್ತಕ ಮತ್ತು ಅಭ್ಯಾಸ ಕ್ರಮ, ಸಂಶೋಧನ ಮಂಡಳಿ ಇತ್ಯಾದಿ ಅಧ್ಯಕ್ಷರಾಗಿದ್ದರು.  

ಕೃತಿಗಳು: ಹರಟೆಗಳ ಮೊದಲನೆಯ ಸಂಕಲನ ‘ಹತ್ತು ಹರಟೆಗಳು’, ಹನ್ನೊಂದು ಹರಟೆಗಳು, ‘ಹನ್ನೆರಡು ಹರಟೆಗಳು, ಸಮಯವಿಲ್ಲ’(ಪ್ರಬಂಧ ಸಂಕಲನ) ಪರೋಕ್ಷ ಸಾಧನಂ ( ಪ್ರಬಂಧ ಸಂಕಲನ)  ಆಯ್ದ ಪ್ರಬಂಧಗಳ ಸಂಕಲನ ಮುಂಬಯಿ ಮಳೆ,  ಹದಿನೈದು ಹರಟೆಗಳ ಸಂಕಲನ’ ‘ಮುಂಬಯಿ ಮೋಹ,  ‘ದ್ವಿತೀಯ ಅಭಿಪ್ರಾಯ’ ಸಂಕಲನ, ಮತ್ತೊಮ್ಮೆ ಆಯ್ದ ಪ್ರಬಂಧಗಳ ಸಂಕಲನ ಮುಂಬಯಿ ಮನೆ ಪ್ರಕಟವಾಗಿದ್ದು, ಸಮಗ್ರ ಪ್ರಬಂಧಗಳು (2010) ಪ್ರಕಟವಾಗಿದೆ. ಕನ್ನಡ ಕಟ್ಟಿ ಬೆಳೆಸಿದ ಜ್ಞಾನಪೀಠ ಪ್ರಶಸ್ತಿ ವಿಜೇತರು,ಕನ್ನಡ ಕಣ್ಮಣಿಗಳು, ಕನ್ನಡ ಕಾರಣ ಪುರುಷರು, ಕನ್ನಡದ ಪೋಷಕರು, ಕನ್ನಡವನ್ನು ಮುನ್ನಡೆಸಿದವರು, ಕನ್ನಡ ಕುಲ ದೀಪಕರು, ಕನ್ನಡ ಕುಲ ರಸಿಕರು, ಕನ್ನಡವನ್ನು ಕಟ್ಟಿದವರು ಇತರೆ ಕೃತಿಗಳು; ಅಜಾತ ಶತ್ರುವಿನ ಆಸ್ಥಾನದಲ್ಲಿ (ಅಂಕಣಬರಹ), ಮಾನವನ ಮುಕ್ತಿಯ ಇತಿಹಾಸ (ಅನುವಾದ), ಯುವಕಭಾರತಿ, ದಿಸ್‌ ಇಯರ್, ದಶಮಾನ ಇತ್ಯಾದಿ 9 ಸಂಪಾದಿತ ಕೃತಿಗಳು, ಪೌರನೀತಿ, ಭಾರತದ ಆಡಳಿತ, ಪ್ರಾಥಮಿಕ ಪೌರನೀತಿ ಮತ್ತು ಸಹ ಸಂಪಾದಕತ್ವದಲ್ಲಿ  ಹೊಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಸಂಪುಟ (೧-೩) ಕೃತಿಗಳು.

ಪ್ರಶಸ್ತಿ-ಗೌರವಗಳು:  ‘ಮುಂಬಯಿಮಳೆ’ ಸಂಕಲನವನ್ನೂ ಗುಲಬಗಾð ಮತ್ತು ಶಿವಾಜಿ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ, ‘ಮುಂಬಯಿಮನೆ’ ಪ್ರಬಂಧ ಸಂಕಲನವನ್ನು ಸ್ವಾಮಿ ರಾಮಾನಂದತೀರ್ಥ ಮರಾಠವಾಡ ವಿಶ್ವವಿದ್ಯಾಲಯವು (ನಾಂದೇಡ್) ಬಿ.ಎ-2. ತರಗತಿಗಳಿಗೆ ಪಠ್ಯವಾಗಿಸಿತ್ತು. ಹೊರನಾಡ ಕನ್ನಡದ ಕಟ್ಟಾಳು ಪ್ರಶಸ್ತಿ, ರಾಷ್ಟ್ರಮನುಕುಲ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಇಂಟರ್ ನ್ಯಾಷನಲ್‌ ಪೆಂಗ್ವಿನ್‌ ಪಬ್ಲಿಷಿಂಗ್‌ ನಿಂದ ರೈಸಿಂಗ್‌ ಪರ್ಸನಾಲಿಟಿ ಆಫ್‌ ಇಂಡಿಯಾ ಅವಾರ್ಡ್ (ಚಿನ್ನದ ಪದಕ), ಸಾರ್ವಜನಿಕ ಸನ್ಮಾನ ನಡೆದು ಅರ್ಪಿಸಿದ ಹಮ್ಮಿಣಿಯಿಂದ ‘ಡಾ.ಜಿ.ಡಿ. ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ‘ಸ್ಥಾಪಿಸಿದ್ದು, ಅಭಿಮಾನಿಗಳು‘ಗುರುಸಂಗತ’ (1992) ಮತ್ತು 75  ಸಂಭ್ರಮಕ್ಕಾಗಿ ‘ಸಾರ್ಥಕತೆಯ ಹೆಜ್ಜೆ ಗುರುತುಗಳು’ (2008) ಹಾಗೂ ‘ಗುರುನಾಥ’ (2010) ಅಭಿನಂದನ ಗ್ರಂಥಗಳನ್ನರ್ಪಿಸಿದ್ದಾರೆ. 

ಜಿ.ಡಿ. ಜೋಶಿ

(28 Aug 1933)