About the Author

ಪ್ರೊ. ಜಿ.ಎಚ್. ಹನ್ನೆರಡು ಮಠ ಅವರು (ಜನನ: 15-03-1940) ಹುಬ್ಬಳ್ಳಿಯ ಹನ್ನೆರಡು ಮಠದವರು. ತಂದೆ ಹುಚ್ಚಯ್ಯ, ತಾಯಿ ಅನ್ನಪೂರ್ಣಮ್ಮ. ಹುಬ್ಬಳ್ಳಿಯಲ್ಲಿ. ಶ್ರೀ ಕಾಡ ಸಿದ್ದೇಶ್ವರ ಮಹಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವೀಧರರು. ಶ್ರೀ ವಿಜಯ ಮಹಾಂತ ಕಲೆ-ವಿಜ್ಞಾನ-ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.  ‘ಪರಂಜ್ಯೋತಿ’ ಪತ್ರಿಕೆಯ ಸಂಪಾದಕರು. ಹುಬ್ಬಳ್ಳಿಯ ಮೂರು ಸಾವಿರ ಮಠ, ಇಳಕಲ್ಲ ಮಠದ ಈಶ್ವರಿ ವಿಶ್ವವಿದ್ಯಾಲಯದ ಕೃತಿಗಳ ಸಂಪಾದನೆ, ಪ್ರಕಟಣೆಯ ಹೊಣೆ ಹೊತ್ತಿದ್ದರು. 

ಕೃತಿರಚನೆ: ಕೂಗಿತ್ತು ಕೂಡಲ ಸಂಗಮ, ಯೋಗಿ ಕಂಡ ಯೌವನ, ಗುರುವೆಂದವರಾರು, ಕಲ್ಯಾಣ ಕೂಗೈತೊ, ದಾಸೋಹ ದೀಪ್ತಿ, ಕೈವಲ್ಯ ಕಾಶ್ಮೀರ-ಇವು ಕಾದಂಬರಿಗಳು. ಕಾವ್ಯಕಲಾಪಿ, ಚೈತ್ಯಪಕ್ಷ, ವಾಣಿಶ್ರೀ, ಬಸವ ಕಾವ್ಯ ದರ್ಶನಂ, ಶಿವನ ಕಂಡೆ, ಚಲುವಿ ಚಲುವಿ ಚಂಪಕ್ಕ, ಹೂವು ಕದ್ದಳು ಹುಡುಗಿ -ಇವು ಕವನ ಸಂಕಲನಗಳು. ಸೀರೆಗೆ ಹುಟ್ಟಿದ ದೇವರ ಕೂಸು, ರಾಜಯೋಗಿಣಿ, ಪೂರ್ಣಜ್ಞ ಗಂಗಾಧರ, ಕರ್ಮಯೋಗಿ ವೀರಚಂದ, ಕನಕಾಂಬರಿಯೊಂದಿಗೆ, ನಂದಿಬೆಟ್ಟದ ನೀಲಿಹುಡುಗಿ -ಇವು ಕಥಾ ಸಂಕಲನಗಳು. ಸಂಪಾದಿತ-ಚಿತ್ಪ್ರಭೆ, ರಜತ ದೀಪ್ತಿ, ಮಹಾಂತ, ವಿಶ್ವಪ್ರಭೆ ಮೂರು ಸಂಪುಟಗಳು, ಭಕ್ತ ವಿಜಯ, ಗಂಗಾಧರ ಲೀಲೆ, ಇದು ನಿಮ್ಮ ಮಠ, ಹಾಗೂ ಬಾರೆ ನೀರೆ-ತಾರೆ ತಂಗಿ, ಯಲ್ಲಾರ ಯಲ್ಲಮ್ಮ, ಮಹಾಂತೇಶ ಭಕ್ತಿಗೀತೆಗಳು, ಮೂರು ಸಾವಿರ ಮಠ ಭಕ್ತಿಗೀತೆಗಳು, ಪರಂಜ್ಯೋತಿ ಗೀತೆಗಳು -ಇವು ಧ್ಮೊವನಿ ಸುರುಳಿಗಳು,

 ಪ್ರಶಸ್ತಿ ಗೌರವಗಳು: ಚಿತ್ತರಗಿಯಲ್ಲಿ, ಚಿತ್ತರಗಿ ಗ್ರಂಥಕ್ಕೆ ಅಡ್ಡ ಪಲ್ಲಕ್ಕಿ ಮೆರವಣಿಗೆ, ಕಾಡಿನಲ್ಲಿ ಕೈವಲ್ಯ ಗ್ರಂಥಕ್ಕೆ ಹುಬ್ಬಳ್ಳಿ ಮೂರು ಸಾವಿರ ಮಠ ವಿಶೇಷ ಬಹುಮಾನ, ದಾಸೋಹ ದೀಪ್ತಿಗೆ ಮುರುಘಮಠದ ಬಹುಮಾನ, ವಿಜಾಪುರ ಜಿಲ್ಲಾ ರಾಜ್ಯೋತ್ಸವ ಸನ್ಮಾನ, 

ಜಿ.ಎಚ್. ಹನ್ನೆರಡುಮಠ

(13 Mar 1940)