About the Author

ಜಿ.ಎನ್.ಅಶೋಕವರ್ಧನ 1952ರಲ್ಲಿ ಜನಿಸಿದರು. ತಂದೆ – ಜಿ.ಟಿ. ನಾರಾಯಣರಾವ್, ತಾಯಿ – ಜಿ.ಎನ್. ಲಕ್ಷ್ಮೀದೇವಿ. ಮಡಿಕೇರಿ, ಬಳ್ಳಾರಿ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸದ ನಂತರ ಕೊನೆಗೆ 1974ರಲ್ಲಿ ಮೈ.ವಿ.ವಿ ನಿಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪೂರೈಸಿದರು. ಮೂವತ್ತಾರು ವರ್ಷಗಳ ವೃತ್ತಿಜೀವನ ಪುಸ್ತಕದ ಬಿಡಿ ಮಾರಾಟ, ವಿತರಣೆ, ಪ್ರಕಾಶನ ಮತ್ತು ತಾತ್ತ್ವಿಕ ಅನುಸಂಧಾನಗಳಲ್ಲಿ ವಿಕಸಿಸಿತು.

ಯಕ್ಷಗಾನ ಸೇರಿದಂತೆ ಸಂಗೀತ, ಸಿನಿಮಾ, ಪ್ರವಾಸ, ಓದು ಇತ್ಯಾದಿ ಅವರ ಹವ್ಯಾಸಗಳು. ಈವರೆಗೂ ಅವರ 600ಕ್ಕೂ ಮಿಕ್ಕಿ ಬರಹಗಳು, 10ಕ್ಕೂ ಮಿಕ್ಕಿ ಇ-ಪುಸ್ತಕಗಳು, ಕೇಳು ಸಾಹಿತ್ಯ ಪ್ರಕಟವಾಗಿವೆ. ‘ತಾತಾರ್ ಶಿಖರಾರೋಹಣ (1973), ಚಕ್ರವರ್ತಿಗಳು (1990), ಬೆಟ್ಟಗುಡ್ಡಗಳು (1994), ಪುಸ್ತಕ ಮಾರಾಟ ಹೋರಾಟ (1999), ಕುಮಾರ ಪರ್ವತದ ಸುತ್ತಮುತ್ತ (2013), ದ್ವೀಪ ಸಮೂಹದ ಕಥೆ (2011, 2014) ಮತ್ತು ಶಿಲಾರೋಹಿಯ ಕಡತ (2014) ಅವರ ಪ್ರಕಟಿತ ಕೃತಿಗಳು. 

ಜಿ.ಎನ್. ಅಶೋಕವರ್ಧನ