About the Author

ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಾಪಕರಾಗಿದ್ದ ಜಿ.ಆರ್‌. ತಿಪ್ಪೇಸ್ವಾಮಿ ಅವರು ಜಿ.ಆರ್.ಟಿ ಎಂದೇ ವಿದ್ಯಾರ್ಥಿಗಳಲ್ಲಿ ಪರಿಚಿತರಾಗಿದ್ದರು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಜ್ಜನಾಡು ಗ್ರಾಮದವರಾದ ಅವರು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯು ನಿರ್ವಹಿಸಿದ್ದರು. 1994ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಆಗಿ ಸೇರಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.
ಪ್ರಸ್ತಾಪ, ಪ್ರಣೀತ,ಅಭಿಮುಖ (ವಿಮರ್ಶಾ ಕೃತಿಗಳು), ಬಂದೀರೆ ನನ್ನ ಜಡೆವೊಳಗೆ, ಕೋಲಾರಮ್ಮ, ದಾಸ ಸಾಹಿತ್ಯ ಮತ್ತು ಜಾನಪದ (ಜಾನಪದ ಕೃತಿಗಳು), ಕನ್ನಡ ನಾಡಿನ ಕಲಾವಿದರು, ಬಾಲಣ್ಣ-ಭಾಗವತರು, ಜೀವನ ಕಥೆ, ಪ್ರಶಸ್ತಿ ಪಡೆದ ಮಹನೀಯರು (ವ್ಯಕ್ತಿಚಿತ್ರಗಳು), ಜಿ.ವೆಂಕಟಯ್ಯ (ಸಾಹಿತ್ಯ ವಾಚಿಕೆ), ಅಗ್ನಿಸಾಕ್ಷಿ, ಕಮಲಾ ಕೃತಿ ವಿಮರ್ಶೆ, ಕುಮಾರವ್ಯಾಸ (ವಿರಹಿಗಳ ಶೃಂಗಾರ), ಮೂಡಲ ವೈಭವ (ಲೇಖನಗಳ ಸಂಕಲನ), ಹೊಂಗಿರಣ, ಸಿರಿನಂದಿ (ಸ್ಮರಣ ಸಂಚಿಕೆ) (ಸಂಪಾದಿತ ಕೃತಿಗಳು)
ತಿಪ್ಪೇಸ್ವಾಮಿ ಅವರು ಉಪನ್ಯಾಸ ನೀಡುತ್ತಿದ್ದ ವೇಳೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಜಿ.ಆರ್.ತಿಪ್ಪೇಸ್ವಾಮಿ