About the Author

ಡಾ.ಜಿ.ಎಸ್. ಮುದಗಲ್ಲರವರ ಹುಟ್ಟೂರು ಗದಗ. ಕುಮಾರವ್ಯಾಸನ ಶ್ರೀ ವೀರನಾರಾಯಣನ ಬೀಡು. 1943 ರಲ್ಲಿ ಜನಿಸಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿ, ಹುಬ್ಬಳ್ಳಿ ಧಾರವಾಡದಲ್ಲಿ ಕಾಲೇಜು ಶಿಕ್ಷಣ ಮುಗಿಸಿ, 1964ರಲ್ಲಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಎಮ್.ಬಿ.ಬಿ.ಎಸ್. ಮತ್ತು ಎಮ್. ಡಿ ಪದವಿಗಳನ್ನು ಪಡೆದರು. 1970ರಲ್ಲಿ ಕರ್ನಾಟಕ ರಾಜ್ಯದ ಆರೋಗ್ಯ ವಿಭಾಗದಿಂದ ತಮ್ಮ ಸೇವೆಯನ್ನು ಪ್ರಾರಂಭಿಸಿ 1990 ರಲ್ಲಿ ಸ್ವಯಂ ನಿವೃತ್ತಿ ಹೊಂದಿದರು. ಅನೇಕ ಹಳ್ಳಿ, ಪಟ್ಟಣಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ ಮೇಲೆ ತಮ್ಮದೇ ಆದ ವೈದ್ಯಕೀಯ ಸೇವೆಯನ್ನು ಗದಗ, ಬೆಂಗಳೂರಲ್ಲಿ ಮಾಡಿ ಮುಗಿಸಿ ಈಗ ಬೆಂಗಳೂರಲ್ಲಿ ತಮ್ಮ ಕುಟುಂಬದವರೊಂದಿಗೆ ನೆಲೆಸಿ, ವಿಶ್ರಾಂತಿ ಪಡೆಯುತ್ತಿದ್ದಾರೆ. ಅನೇಕ ಹವ್ಯಾಸಗಳನ್ನು ಹೊಂದಿರುವ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅವರ ಆತ್ಮಕಥನ 'ಬಿಳಿಯ ಕೋಟು' ಪ್ರಕಟಗೊಂಡಿದೆ.

ಜಿ.ಎಸ್. ಮುದಗಲ್ಲ

ABOUT THE AUTHOR