About the Author

ಕಾದಂಬರಿ, ನಾಟಕ, ಸಂಗೀತ, ಶಿಶು ಸಾಹಿತ್ಯ ಮುಂತದ ರಂಗಗಳಲ್ಲಿ ಕಲೆಯ ಆಸಕ್ತಿಯನ್ನು ಪ್ರದರ್ಶಿಸಿರುವ ಗೀತಾ ಸೀತಾರಾಂರವರು ಹಲವಾರು ಸಾಹಿತ್ಯಿಕ ಪ್ರಶಸ್ತಿಗಳನ್ನು ಪಡೆದಿದ್ಧಾರೆ. ಸಿ.ಎಫ್,ಟಿ,ಆರ್,ಐ ನಲ್ಲಿ  ಉಪನಿದೇರ್ಶಕರಾಗಿರುವ ಅವರು 1952 ಫೆಬ್ರವರಿ 10 ರಂದು ಜನಿಸಿದರು. ಬೇಲಿ, ಆಸರೆ, ಸಪ್ತಸ್ವರ, ನಾಕುತಂತಿ, ಉಂಗುರ, ನೆಳಲು, ಪೃಥಾ ಇವರ ಪ್ರಮುಖ ಕಾದಂಬರಿಗಳು. ಭೀಷ್ಮ, ಊರ್ಮಿಳಾ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಶಿಶು ಸಾಹಿತ್ಯವನ್ನು ರಚಿಸಿರುವ ಇವರು ಕರ್ನಾಟಕ ಸಂಗೀತ ನಡೆದು ಬಂದ ದಾರಿ, ಪುಸ್ತಕ ನಿಮಗೆಷ್ಟು ಗೊತ್ತು? ಎಂಬ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಎರಡು ಹೊಸ ರಾಗಗಳ ಕೊಡುಗೆ, ಆಕಾಶವಾಣಿಯ ಶಾಸ್ತ್ರೀಯ ಹಾಗೂ ಲಘು ಸಂಗೀತ ಗಾಯಕಿ, ಜಯದೇವ ಅಷ್ಟಪದಿಗಳು, ಡಿವಿಜಿಯವರ ಅಂತಃಪುರ ಗೀತೆಗಳು, ದಾಸರ ಪದಗಳು, ಮೊದಲಾದವುಗಳಿಗೆ ರಾಗಸಂಯೋಜನೆ, ಗೀತಾಂಜಲಿ ಸೆಂಟರ್ ಆಫ್ ಫೈನ್ ಆರ್ಟ್ ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ. ಈಟಿವಿ ಎದೆ ತುಂಬಿ ಹಾಡುವೆನು ಆಹ್ವಾನಿತ ತೀರ್ಪುಗಾರ್ತಿ, ಶ್ರೀ ವೆಂಕಟೇಶ್ವರ ವಿ.ವಿ. ಮತ್ತು ಭಾರತಿ ದಾಸನ್ ವಿ.ವಿ.ಯ ಆಹ್ವಾನಿತ ಸಂಗೀತ ಉಪನ್ಯಾಸಕಿಯಾಗಿ ಯಶಸ್ವಿಯಾಗಿದ್ದು ವಿದೇಶಗಳಲ್ಲಿ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 

ಮಾಸ್ತಿ ಜನ್ಮಶತಾಬ್ದ ಪುರಸ್ಕಾರ, ವನಿತಾ ಪ್ರಜಾವಾಣಿ ಕಥಾಸ್ಪರ್ಧೆ ದೀಪಾವಳಿ ಪುರಸ್ಕಾರ, ಮೈಸೂರು ಮಿತ್ರ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ತಿರುಚ್ಚಿ ಫೈನ್ ಆರ್ಟ್ಸ್-ಪಲ್ಲವಿ ಗಾಯನ ಪ್ರಥಮ ಬಹುಮಾನ, ಮಾನಸ ಗಂಗೋತ್ರಿ ಶಾಸ್ತ್ರೀಯ ಸಂಗೀತ ಸ್ಪರ್ಧೆ ಪ್ರಥಮ ಬಹುಮಾನ, ಕುವೆಂಪು ವಿದ್ಯಾಪರಿಷತ್ ಶ್ರೀರಾಮಾಯಣ ದರ್ಶನಂ ಗಮಕ ಗಾಯನ-ಪ್ರಥಮ ಬಹುಮಾನ, ರಾಗ ಸಂಯೋಜನೆ CFTRI ಪ್ರಶಸ್ತಿ, ಮಾನಸ ಮೂವರ್ಸ್ ಕಾದಂಬರಿ ಸ್ಪರ್ಧೆ ಬಹುಮಾನಗಳಿಗೆ ಭಾಜನರಾಗಿದ್ದಾರೆ. 

ಗೀತಾ ಸೀತಾರಾಂ

(10 Feb 1952)