About the Author

‘ಗಿರಿ ಹೆಗ್ಡೆ ಅವರು ಮೂಲತಃ ಮಲೆನಾಡಿನ ಸಾಗರ ತಾಲೂಕಿನ ಗೋಟಗಾರು ಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ.ಎ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.ಎಂ.ಎಸ್.ಪಿ. ಪೂರೈಸಿದ್ದಾರೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವಿಜ್ಞಾನದ ಅಧ್ಯಾಪಕರಾಗಿದ್ದರು. 1970 ರಲ್ಲಿ ಅಮೇರಿಕಕ್ಕೆ ಹೋಗಿ ಸದರ್ನ್ ಇಲನಾಯ್ ಯೂನಿವರ್ಸಿಟಿಯಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಪಿ. ಹೆಚ್.ಡಿ ಪದವಿ ಪಡೆದರು. ಕ್ಯಾಲಿಪೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ, outstanding professor ಎಂಬ ಮನ್ನಣೆಗೆ ಪಾತ್ರರಾಗಿ, 30 ವರ್ಷ ಸೇವೆ ಸಲ್ಲಿಸಿ, ಸದ್ಯ ನಿವೃತ್ತರು. 25ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳನ್ನು ಬರೆದಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ಕ್ಲೋವಿಸ್ ಎಂಬ ಪಟ್ಟಣದಲ್ಲಿ ವಾಸವಿದ್ಧಾರೆ.

ಕೃತಿಗಳು : ಗತಿ ಸ್ಥಿತಿ ಮತ್ತೆಲ್ಲ( ಸೃಜನಶೀಲ ಬರವಣಿಗೆ)

ಗಿರಿ ಹೆಗ್ಡೆ