About the Author

ಗೋವಿಂದರಾವ್ ಅ. ಜಾಲಿಹಾಳ ಅವರು ಮೂಲತಃ ಗದಗದವರು. ತಂದೆ ಅನಂತರಾವ್ ಜಾಲಿಹಾಳ. ತಾಯಿ ರಾಧಾಭಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಗದಗದಲ್ಲಿ. ಸ್ನಾತಕೋತ್ತರ ಪದವೀಧರು. ಮುಂಬೈ ವಿಶ್ವವಿದ್ಯಾಲಯ. “THE ETHICAL CONTRIBUTION’S OF THE LATE PROF HIRIYANNA” ಅವರ ಪಿಎಚ್.ಡಿ. ಮಹಾಪ್ರಬಂಧ. ಪ್ರಾಧ್ಯಾಪಕರಾಗಿ ವೃತ್ತಿ ಆರಂಭ. ಬಾಲ್ಯದಿಂದಲೂ ತತ್ತ್ವಶಾಸ್ತ್ರ, ಸಂಗೀತ, ಸಾಹಿತ್ಯಗಳತ್ತ ಒಲವು. ಗದ್ಯದಿಂದ ಪದ್ಯಕ್ಕೆ, ವಿಜಯಪಥ, ಅಂಚೆದಾರಿಯಲ್ಲಿ ಅವರ ಕವನ ಸಂಕಲನ.ವಂಶವೃಕ್ಷ ಮತ್ತು ಸಂಸ್ಕಾರ ಒಂದು ತುಲನಾತ್ಮಕ ವಿಮರ್ಶೆ, ಕಾವ್ಯಮಂಥನ ಅವರ ವಿಮರ್ಶಾ ಕೃತಿಗಳು. ಪಾಶ್ಚಾತ್ಯ ತತ್ತ್ವಶಾಸ್ತ್ರ ಬೋಧಕರಾಗಿ ಫ್ಲಾರಿಡಾದ ಪೆನ್ಸ್‌ಕೋಲಾ ಕಾಲೇಜಿನಿಂದ ಪ್ರಶಸ್ತಿ ಪಡೆದ ಪ್ರಮುಖರಲ್ಲೊಬ್ಬರು. ಅವರು THE TRADITIONAL HINDU SOCIAL PHILOSOPHY AND ITS RELEVANCE TO THE MODERN HINDU SOCIETY ವಿಷಯ ಕುರಿತು ಯೂನಿವರ್ಸಿಟಿ ಗ್ರ್ಯಾಂಟ್ ಕಮೀಷನ್‌ ನಿಂದ ಸಂಶೋಧನೆ ನಡೆಸಿದ್ದಾರೆ.

ಗೋವಿಂದರಾವ್ ಅ. ಜಾಲಿಹಾಳ (ಜಾ.ಗೋ)