About the Author

ಲೇಖಕಿ ಡಾ. ಗುರುದೇವಿ ಹುಲೆಪ್ಪನವರಮಠ  ಮೂಲತಃ ಬೆಳಗಾವಿಯವರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಇಂಗ್ಲಿಷ್) ಪದವೀಧರರು. ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ-ಕನ್ನಡ (ಬಾಹ್ಯ) ಪದವೀಧರರು.‘ ‘ಅತಿಭೌತಿಕ ಕಾವ್ಯ, ಕನ್ನಡ ವಚನ ಸಾಹಿತ್ಯ: ಒಂದು ತೌಲನಿಕ ಅಧ್ಯಯನ’ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ. ಕೆ.ಎಲ್.ಇ ಸಂಸ್ಥೆಯ ಸವದತ್ತಿ ಹಾಗೂ ಧಾರವಾಡ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ, ಕರ್ನಾಟಕ ವಿ.ವಿ ಧಾರವಾಡ ಹಾಗೂ ಬೆಳಗಾವಿ ಕೇಂದ್ರದಲ್ಲಿ ಉಪನ್ಯಾಸಕಿಯಾಗಿ ಹಾಗೂ ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ವಿ.ವಿ.ಯಲ್ಲಿ ಸಂಶೋಧನಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸದ್ಯ ನಿವೃತ್ತರು.

ಕೃತಿಗಳು: ಆಸೆ ಹಾಗೂ ಆತ್ಮವಿಶ್ವಾಸ,  ಲಿಂ. ಬಿದರಿ ಕುಮಾರಸ್ವಾಮಿಗಳು (ಜೀವನ ಚರಿತ್ರೆ), ನನ್ನಚ್ಚಿ ಗುಬ್ಬಿ (ಹಾಸ್ಯ ಬರಹಗಳ ಕೃತಿ),  ಶರಣ ಧರ್ಮ ಮತ್ತು ಮಹಿಳೆ, ಬಿಡುಗಡೆಯ ಸಡಗರ (ಹಾಸ್ಯ ಪ್ರಬಂಧಗಳ ಸಂಕಲನ), ಮೂಗು ಮುರಿದವರು (ಹಾಸ್ಯ ಬರಹಗಳು), ಶರಣರ ದೃಷ್ಟಿಯಲ್ಲಿ ಮನಸ್ಸು, ನೀರು ಬಂತು ನೀರು (ಹಾಸ್ಯ ಬರಹಗಳು), ತನುವೆಂಬ ಹುತ್ತದಲ್ಲಿ (ಹಾಸ್ಯ ಬರಹಗಳು), ಶರಣ ಸನ್ನಿಧಿ (ವಚನಗಳ ವಿಶ್ಲೇಷಣೆ) ಶ್ರೀ ಎಚ್.ವಿ. ಕೌಜಲಗಿಯವರು (ಜೀವನ ಚರಿತ್ರೆ), ಡಾ. ಸಂಗಪ್ಪ ಗುರಪ್ಪ ದೇಸಾಯಿ (ಜೀವನ ಚರಿತ್ರೆ), ಶರಣ ದರ್ಶನ (ವೈಚಾರಿಕ ಲೇಖನಗಳ ಸಂಗ್ರಹ), ಅಜ್ಜಿಗೆ ಹೈ ಹೈ ಹೈ (ಮಕ್ಕಳ ಕವಿತೆಗಳು), ಮುರುಗೋಡದ ಮಹಾಂತಜ್ಜನವರು (ಜೀವನ ಚರಿತ್ರೆ), ಭುವಿಯ ಬೆಳಕು (ವೈಚಾರಿಕ ಲೇಖನಗಳ ಸಂಗ್ರಹ), ಶರಣೆಯರ ಸೂಳ್ನುಡಿ (ವಚನಗಳ ವಿಶ್ಲೇಷಣೆ), ಸನ್ನಿಧಿ (ವ್ಯಕ್ತಿ ಚಿತ್ರಣಗಳು), ಚಿದ್ಬೆಳಗು (ಚಿಂತನೆಗಳ ಸಂಗ್ರಹ), ಪುಸ್ತಕ ಪರಿಮಳ (ಪುಸ್ತಕ ರಸ ವಿಮರ್ಶೆ),  ಚಿತ್ಕಿರಣ (ಚಿಂತನೆಗಳ ಸಂಗ್ರಹ), ಬೆಳಕು ತಂದವರು (ವ್ಯಕ್ತಿ ಚಿತ್ರಣಗಳು), ಚುಟುಕು-ಗುಟುಕು (ವ್ಯಕ್ತಿಚಿತ್ರಣಗಳು), ಮಕ್ಕಳ ಕವಿ ಉಳವೀಶ (ಜೀವನ ಚರಿತ್ರೆ), ಹೊಸದಲ್ಲ ಬಿಡಿ (ಕವನ ಸಂಕಲನ), ಬರಿಯಾಕ ಬಂದsರ ಬಾ ಅಂತ ಕರದಾರ (ಪುಸ್ತಕ ರಸ ವಿಮರ್ಶೆ), ಸಾಹಿತ್ಯ ಸುರಧಿ. ಪಠ್ಯವಾದ ಕೃತಿಗಳು : ಕೆಟ್ಟ ಕನಸುಗಳು (ರಾಣಿಚೆನ್ನಮ್ಮ ವಿ.ವಿ. ಬಿಎಸ್ ಸಿ/ಬಿಎಸ್ ಡಬ್ಲ್ಯು-2ನೇ ಸೆಮಿಸ್ಟರ್ ಹಾಗೂ 4ನೇ ಸೆಮಿಸ್ಟರ್), ಭಾಷಣ ಭೀಷಣ ಪ್ರಸಂಗಗಳು (ಲಲಿತ ಪ್ರಬಂಧಗಳು-ರಾಯಚೂರು ಸ್ನಾತಕೋತ್ತರ ಕೇಂದ್ರ), ಅಗಲಿದ ಚಪ್ಪಲಿಗಳ ಅಳಲು (ಕರ್ನಾಟಕ ವಿ.ವಿ. ಬಿಕಾಂ ಭಾಗ-2)  ಕಸಬರಿಗೆಗೊಂದು ಖಿ(ಬಿ)ನ್ನವತ್ತಳೆ (ಮಹಾರಾಷ್ಟ್ರ ರಾಜ್ಯದ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳಿಗೆ ಪಠ್ಯ) ಸಂಪಾದನಾ ಕೃತಿಗಳು: ಸವದತ್ತಿಯ ಶ್ರೀಮಂತ ಬೆಳ್ಳುಬ್ಬಿ ಮನೆತನದ ಚರಿತ್ರೆ, ಬಯಲಸಿರಿ (ಸಂಸ್ಮರಣ ಗ್ರಂಥ), ನೆನಪು ನಂದಾದೀಪ (ಸಂಸ್ಮರಣಾ ಗ್ರಂಥ), ಗಿರಿನವಿಲು (ಸಂಸ್ಮರಣಾ ಗ್ರಂಥ). 

ಪ್ರಶಸ್ತಿ-ಪುರಸ್ಕಾರಗಳು: ಚಿದ್ಬೆಳಗು ಕೃತಿಗೆ ಮಹಿಲಾ ಪ್ರಶಸ್ತಿ, ಬನಹಟ್ಟಿಯ ಲಿಂ. ಮಹಾದೇವಪ್ಪ ಕರ್ಲಣ್ಣ ದತ್ತಿ ನಿಧಿ ಪ್ರಶಸ್ತಿ, ಬೆಳಗಾವಿಯಿಂದ ಲಿಂ. ಚಂದ್ರಮೌಳಿ ಕೆ. ದತ್ತಿ ನಿಧಿ ಪ್ರಶಸ್ತಿ, ಹುಬ್ಬಳ್ಳಿಯಿಂದ  ಮೂಜಗಂ 1996ರ ಉತ್ತಮ ಗ್ರಂಥ ಪುರಸ್ಕಾರ ಧಾರವಾಡದಿಂದ ಮಹಾಲಕ್ಷ್ಮಿ ಮಂದಿರ ಪ್ರಶಸ್ತಿ, ನೀರು ಬಂತು ನೀರು ಕೃತಿಗೆ ಶ್ರೀಮತಿ ಗೀತಾ ದೇಸಾಯಿಉ ದತ್ತಿ ನಿಧಿ ಪ್ರಶಸ್ತಿ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕುಂಬಾಸ ದತ್ತಿ ನಿಧಿ ಪ್ರಶಸ್ತಿ, ಇದೇ ರೀತಿ, ಭುವಿನ ಬೆಳಕು ಕೃತಿಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. 2019ರಲ್ಲಿ ಗೋಕಾಕನಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಉತ್ತಮ ಕವಯತ್ರಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವ-ಸನ್ಮಾನಗಳು ಸಂದಿವೆ. 

 

ಗುರುದೇವಿ ಹುಲೆಪ್ಪನವರಮಠ

(13 Mar 1959)

Books by Author