About the Author

ನಾಟಕಕಾರ, ಬರಹಗಾರ, ಪ್ರಾಧ್ಯಾಪಕರಾದ ಡಾ.ಎಚ್.ಎಂ. ಕುಮಾರಸ್ವಾಮಿ ಅವರ ಹುಟ್ಟೂರು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದರು. ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವ ಇವರು ನಾಟಕ, ಲೇಖನ, ವಿಮರ್ಶೆ ಮುಂತಾದ ಸಾಹಿತ್ಯಿಕ ಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. 

ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಗ್ರಾಮ ಸೇತುವೆ, ಖಾಲಿ ಬಾಟಲಿಗಳು (ಕಿರು ನಾಟಕ), ಬಯಲು (ನಾಟಕ), ಪಿರಮಿಡ್‌ (ಹಿಂದಿ ಕತೆಗಳ ಅನುವಾದ), ಬಂಕಾಪುರದ ಬಯಲಾಟ (ಅನುವಾದಿತ ಕೃತಿ), ವಿಚಿತ್ರೇಶ್ವರನ ಜಾತ್ರೆ, ರಾಷ್ಟ್ರ ಕವಿ ಗೋವಿಂದ ಪೈ ವ್ಯಕ್ತಿತ್ವ ಔರ್ ಕೃತಿತ್ವ(ಹಿಂದಿ ಕೃತಿ) ಭಾರತೇಂದುರವರ ಮೂರು ನಾಟಕಗಳು(ಅನುವಾದಿತ), ಕರಾವಳರಂಗ ಭೂಮಿ, ಮಾಯಮೃಗ , ತಥಾ ಅನ್ಯ ಕಥಾ ನೀಯಾಂ, ಮುಂತಾದವು. ಇವರ ಎಂಟು ನಾಟಕಗಳು ರಾಷ್ಟ್ರೀಯ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ.

ಎಚ್.ಎಂ. ಕುಮಾರಸ್ವಾಮಿ