About the Author

ಕವಿ, ಹೋರಾಟಗಾರ, ಉಪನ್ಯಾಸಕರಾದ ಹುಲಿಕುಂಟೆ ಮೂರ್ತಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯಲ್ಲಿ. ತಾಯಿ - ಹೊನ್ನಮ್ಮ, ತಂದೆ ನಾಟಕದ ಮೇಷ್ಟ್ರು ವೆಂಕಟರಂಗಯ್ಯ. ವಿದ್ಯಾರ್ಥಿ ದೆಸೆಯಿಂದಲೂ ಚಳವಳಿಗಳಲ್ಲಿ ಭಾಗಿಯಾಗಿ ಹೋರಾಟದ ಹಾಡುಗಳನ್ನ ಕಟ್ಟಿ, ಹಾಡುತ್ತಾ ಬೆಳೆದ ಹುಲಿಕುಂಟೆ ಮೂರ್ತಿ ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ ಬರೆಯಲು ಆರಂಭಿಸಿದವರು. ಅವರ ಪ್ರಕಟಿತ ಕೃತಿಗಳು ಮಂಟೇಸ್ವಾಮಿ ಪರಂಪರೆ ಕುರಿತ ಪರಂಜ್ಯೋತಿ, ಹಾಗೂ 'ನೀಲಿಗ್ಯಾನ' ಎಂಬ ಕವಿತೆಗಳ ಸಂಕಲನ ಜೊತೆಗೆ 'ಹೂಬಿಟ್ಟ ಕಣ್ಣು' ಎಂಬ ಲೇಖನಗಳ ಸಂಗ್ರಹ.

ಅವರ 'ನೀಲಿಗ್ಯಾನ' ಸಂಕಲನಕ್ಕೆ 2013ರ ರಾಜ್ಯ ಸರ್ಕಾರದ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ನಾಟಕಗಳಿಗೆ ಹಾಡು, ಹೋರಾಟದ ಹಾಡುಗಳನ್ನ ಬರೆದಿರುವ ಮೂರ್ತಿಯವರು ಕೌದಿ ಎಂಬ ಚಲನಚಿತ್ರಕ್ಕೆ ಗೀತರಚನೆ ಮಾಡಿದ್ದು ಈ ಗೀತೆಗೆ ಕರ್ನಾಟಕ ಸರ್ಕಾರ ಕೊಡಮಾಡುವ 2014ರ ಅತ್ಯುತ್ತಮ ಗೀತರಚನೆಕಾರ ರಾಜ್ಯ ಪ್ರಶಸ್ತಿ ಲಭಿಸಿದೆ. 2018ರಲ್ಲಿ ಬೆಂಗಳೂರಿನ ಪ್ರೇರಣ ಸಂಸ್ಥೆ ಮಹಾತ್ಮ ಜ್ಯೋತಿ ಭಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಬಯಲು ಬಳಗ ಹಾಗೂ ನಾಡಿನ ವಿವಿಧ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಇವರು, ಕಳೆದ ಇಪ್ಪತ್ತು ವರ್ಷಗಳಿಂದ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಲೇಖನ, ಕತೆ, ಕವಿತೆ, ಅಂಕಣಗಳನ್ನು ಬರೆದಿದ್ದಾರೆ. ಇವರ 'ಅನ್ನ' ಕತೆಯನ್ನು ಕುವೆಂಪು ವಿಶ್ವ ವಿದ್ಯಾಲಯ ಪದವಿ ತರಗತಿಯೊಂದಕ್ಕೆ ಪಠ್ಯವನ್ನಾಗಿಸಿದೆ. 

 

ಹುಲಿಕುಂಟೆ ಮೂರ್ತಿ

(25 Aug 1981)

BY THE AUTHOR