About the Author

ಹಾಡುಗಾರರು, ರಂಗಭೂಮಿ ಕಲಾವಿದರಾದ ಹುರುಗಲವಾಡಿ ರಾಮಯ್ಯ ಅವರು ದಲಿತ, ಕಮ್ಯುನಿಸ್ಟ್‌, ಭಾಷಾ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಜಾನಪದ, ಹೋರಾಟದ ಹಾಗೂ ಸಾಕ್ಷರತಾ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. 

ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯರು ಕೂಡ. ಬೀದಿ ನಾಟಕಗಳ ಮೂಲಕ ಜನಪರಿಗೆ ಪರಿಸರ ಪ್ರಜ್ಞೆ ಮೂಡಿಸುತ್ತಿರು ಇವರು ಹೋರಾಟದ ಹಾಡುಗಳು, ಸೂರು ಸೂರಿನ ದೀಪ, ನೆಲದ ಪದ, ಸಕ್ಕರೆ ಸೀಮೆಯ ನಾಟಕ ಡಿಎಸ್‌ಎಸ್‌ ನಾರಾಯಣ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಕ್ರಾಂತಿ ಗಾಯಕ ಹಾಗೂ ಜಾನಪದ ಕೋಗಿಲೆ ಪ್ರಶಸ್ತಿಗಳು ಸಂದಿವೆ. 

ಹುರುಗಲವಾಡಿ ರಾಮಯ್ಯ